For the best experience, open
https://m.bcsuddi.com
on your mobile browser.
Advertisement

ಶಿರೂರು ಗುಡ್ಡ ಕುಸಿತ: ಮತ್ತೋರ್ವ ಮಹಿಳೆಯ ಮೃತದೇಹ ಪತ್ತೆ

09:14 AM Jul 23, 2024 IST | Bcsuddi
ಶಿರೂರು ಗುಡ್ಡ ಕುಸಿತ  ಮತ್ತೋರ್ವ ಮಹಿಳೆಯ ಮೃತದೇಹ ಪತ್ತೆ
Advertisement

ಶಿರೂರು: ಅಂಕೋಲಾ ಶಿರೂರು ಗುಡ್ಡ ಕುಸಿತದ ಪ್ರಕರಣದಲ್ಲಿ ಮಂಗಳವಾರ ಮುಂಜಾನೆ ಗಂಗಾವಳಿ ನದಿ ಸಂಗಮದ ಮಂಜುಗುಣಿಯಲ್ಲಿ ಇನ್ನೊಂದು ಮಹಿಳೆಯ‌ ಮೃತದೇಹ ಪತ್ತೆಯಾಗಿದ್ದು ಹೀಗಾಗಿ ಒಟ್ಟು ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆಯಾದಂತಾಗಿದೆ.

ಶಿರೂರು ಪ್ರಕರಣದಲ್ಲಿ ಹೆದ್ದಾರಿ ಪಕ್ಕದಲ್ಲಿ ಹೋಟೆಲ್ ಇಟ್ಟುಕೊಂಡಿದ್ದ ಒಂದೇ ಕುಟುಂಬದ 5 ಮಂದಿ, ಉಳುವರೆಯ ಒಬ್ಬ ಮಹಿಳೆ ಹಾಗೂ ಮೂವರು ಟ್ಯಾಂಕರ್ ಚಾಲಕರು ಹಾಗೂ ಟಿಂಬರ್ ಲಾರಿ ಚಾಲಕ ನಾಪತ್ತೆ ಆಗಿರುವ ಬಗ್ಗೆ ದೂರುಗಳು ಬಂದಿತ್ತು.

ಗಂಗಾವಳಿ ನದಿ ತೀರದ ಉಲುವರೆ ಗ್ರಾಮದ ಮಹಿಳೆಯ ಮೃತದೇಹ ಆಗಿರಬಹುದು ಎಂದು ಅನುಮಾನವಿದ್ದು, ಆಕೆಯದ್ದೇ ಎಂಬುದನ್ನು ಕುಟುಂಬದವರು ಪತ್ತೆ ಮಾಡಬೇಕಿದೆ.

Advertisement

Author Image

Advertisement