ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಮಸಾಜ್ ಮಾಡಿಕೊಂಡ ಶಿಕ್ಷಕಿ- ವಿಡಿಯೋ Viral.!

05:46 PM Oct 10, 2024 IST | BC Suddi
Advertisement

ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ನೆಲದ ಮೇಲೆ ಮಲಗಿದ್ದು, ವಿದ್ಯಾರ್ಥಿಗಳು ಆಕೆಯ ಕಾಲುಗಳ ಮೇಲೆ ನಿಂತು ಮಸಾಜ್ ಮಾಡುತ್ತಿರುವ ವಿಡಿಯೋವೊಂದು ಹರಿದಾಡುತ್ತಿದೆ.

Advertisement

ಇಂತದ್ದೊಂದು ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ.

ಇದನ್ನು ಓದಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಕರ್ತಾರ್‌ಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿತ್ರೀಕರಿಸಲಾದ ಈ ವಿಡಿಯೋದಲ್ಲಿ ಶಿಕ್ಷಕಿ ತರಗತಿಯಲ್ಲಿ ಮಲಗಿರುವುದನ್ನು ಕಾಣಬಹುದು. ಬಳಿಕ ಮಕ್ಕಳು ಶಿಕ್ಷಕಿಗೆ ಮಸಾಜ್ ಮಾಡುತ್ತಿರುವುದು ತೋರಿಸುತ್ತದೆ.

ವಿಡಿಯೋ ವೈರಲ್ ಬಳಿಕ ಸರ್ಕಾರಿ ಶಾಲೆಗಳ ಸ್ಥಿತಿಯ ಬಗ್ಗೆ ಆತಂಕ ವ್ಯಕ್ತವಾಗಿದ್ದು, ಘಟನೆಯ ಬಗ್ಗೆ ಹಲವು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : ಭಾರತದ ಹೆಮ್ಮೆಯ ಅಗ್ರಗಣ್ಯ ಕೈಗಾರಿಕೋದ್ಯಮಿ ರತನ್ ನಾವಲ್ ಟಾಟಾ ನಿಧನ.!

ಪ್ರತಿಯೊಬ್ಬ ವ್ಯಕ್ತಿಯ ಘನತೆ ಹಾಗೂ ವೈಯುಕ್ತಿಕ ಹಕ್ಕಾಗಿರುವ ಶಿಕ್ಷಣವು ವೈಯಕ್ತಿಕ ಬೆಳವಣಿಗೆಗೆ ಬಹಳ ಅಗತ್ಯವಾಗಿದೆ. ಅದಲ್ಲದೇ, ದೇಶದ ಅಭಿವೃದ್ಧಿಯಲ್ಲಿ ಶಾಲಾ ಶಿಕ್ಷಣ ಪಾತ್ರ ಅಗಾಧವಾದದ್ದು. ಇದರಿಂದ ದೇಶವು ಪ್ರಗತಿಯತ್ತ ಸಾಗಲು ಸಾಧ್ಯವಾಗುತ್ತದೆ. ಶಿಕ್ಷಕರು ವಿದ್ಯಾರ್ಥಿಗೆ ದಾರಿದೀಪವಾಗಿರಬೇಕು.

ಮಾರ್ಗದರ್ಶನ, ಶಿಸ್ತು, ಸಂಯಮ, ವಿದ್ಯೆಯನ್ನು ಮಕ್ಕಳಿಗೆ ತಿಳಿಸಿ ಕೊಡಬೇಕು. ಆದರೆ ಶಾಲೆಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ನಿಜಕ್ಕೂ ದುರದೃಷ್ಟಕರ.

Advertisement
Next Article