ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಶಾಲೆಗಳಿಗೆ ಬಾಂಬ್‌ ಬೆದರಿಕೆ : ಇಸ್ಲಾಂಗೆ ಮತಾಂತರವಾಗಿ ಇಲ್ಲವೇ ಸಾಯಲು ಸಿದ್ಧರಾಗಿ - ಖಾರಿಜೈಟ್ಸ್ ಹೆಸರಲ್ಲಿ ಇ-ಮೇಲ್

12:44 PM Dec 01, 2023 IST | Bcsuddi
Advertisement

ಬೆಂಗಳೂರು : ಇಂದು ಬೆಳ್ಳಂಬೆಳಿಗ್ಗೆ ಸಿಲಿಕಾನ್‌ ಸಿಟಿಯಲ್ಲಿ 15 ಖಾಸಗಿ ಶಾಲೆಗಳಿಗೆ ಬಾಂಬ್‌ ಬೆದರಿಕೆಯ ಇ-ಮೇಲ್​ ವೊಂದು ಬಂದಿದೆ. ಇದರಿಂದ ಶಾಲಾ ಆಡಳಿತ ಮಂಡಳಿ,ಮಕ್ಕಳು ಪೋಷಕರು ಆತಂಕಗೊಂಡ ಘಟನೆಯೂ ನಡೆದಿದೆ. ಈ ವಿಷಯ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ಎಲ್ಲಿಂದ ಮೇಲ್ ಬಂದಿದೆ ಎಂದು ಪರಿಶೀಲಿಸಿದಾಗ ನಿಜಕ್ಕೂ ಶಾಕ್‌ ಆಗಿದೆ. ಹೌದು ಬಾಂಬ್‌ ಬೆದರಿಕೆ ಬರುತ್ತಿದ್ದಂತೆ ಮಕ್ಕಳನ್ನು ಮನೆಗೆ ಕಳುಹಿಸಿ ಶಾಲೆ ರಜೆ ಘೋಷಣೆ ಮಾಡಿ ಪೊಲೀಸರು ಶಾಲೆಗಳಿಗೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಇ-ಮೇಲ್ ಬೆದರಿಕೆ ಮುಜಾಹಿದ್ದಿನ್ ಹೆಸರಲ್ಲಿ ಬಂದಿದೆ. 'ಎಲ್ಲರೂ ಇಸ್ಲಾಂಗೆ ಮತಾಂತರಗೊಳ್ಳಲು ತಯಾರಿಗಿರಿ. ಇಲ್ಲ ಎಲ್ಲರೂ ಸಾಯಲು ಸಿದ್ಧರಾಗಿರಿ. ನಿಮ್ಮನ್ನು ಹಾಗೂ ನಿಮ್ಮ ಮಕ್ಕಳನ್ನು ಸಾಯಿಸುತ್ತೇವೆ. ನೀವೆಲ್ಲರೂ ಕೂಡ ಅಲ್ಲಾಹುವಿನ ವಿರೋಧಿಗಳು. ನೀವೆಲ್ಲರೂ ಸಾಯಲು ಸಿದ್ಧರಾಗಿರಿ 'ಎಂದು ಇಮೇಲ್​ನಲ್ಲಿ ಬರೆಯಲಾಗಿದೆ. ಆದ್ರೆ, ಮುಜಾಹಿದ್ದಿನ್ ಯಾರು? ಎಲ್ಲಿಂದ ಈ ಇ-ಮೇಲ್ ಬಂದಿದೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹಿಂದೂ-ಮುಸ್ಲಿಂ ಗಲಾಟೆಗಳ ಮಧ್ಯೆ ಈ ರೀತಿ ಬೆದರಿ ಹಾಕಿರುವುದು ಬೆಂಕಿಗೆ ತುಪ್ಪ ಸುರಿದಂತಾಗಿದೆ. ಈ ಹಿಂದೆ ಅನೇಕ ಬಾರಿ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಆದ್ರೆ, ಬಾರಿ ಉಗ್ರವಾದ ಪದಗಳೊಂದಿಗೆ ಬೆದರಿಕೆ ಬಂದಿದ್ದು, ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಇದನ್ನು ಪೊಲಿಸರು ಗಂಭೀರವಾಗಿ ಪರಿಗಣಿಸಿದ್ದು, ಬಸವೇಶ್ವರ ನಗರದ ಶಾಲೆಯ ಮೂಲೆ ಮೂಲೆಯಲ್ಲಿ ತಪಾಸಣೆ ಮಾಡುತ್ತಿದ್ದಾರೆ. ಈ ಕುರಿತು ಮಾತನಾಡಿದ ಗೃಹ ಸಚಿವ ಪರಮೇಶ್ವರ್ ಯಾರೇ ತಪ್ಪು ಮಾಡಿದ್ದರೂ ಕಠಿಣ ಕ್ರಮಕೈಗೊಳ್ಳುತ್ತೇವೆ. ಪೋಷಕರು, ಮಕ್ಕಳು ಯಾರೂ ಆತಂಕ ಪಡುವ ಅಗತ್ಯವಿಲ್ಲ​​​. ಇ-ಮೇಲ್ ಬೆದರಿಕೆ ಪ್ರಕರಣವನ್ನು ಲಘುವಾಗಿ ಪರಿಗಣಿಸುವುದಿಲ್ಲ. ಇಂತಹ ಬೆದರಿಕೆ ಹಾಕುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ಇಂತಹ ಘಟನೆಗಳು ಮತ್ತೆ ನಡೆಯದಂತೆ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಖಡಕ್ ಆಗಿ ಹೇಳಿದರು. ಟೈಪ್ ಮಾಡಿದ್ದನು ನೋಡಿದ್ರೆ ಹೈ ಲೆವೆಲ್ ಟೆರರಿಸ್ಟ್ ತರ ಕಾಣುತ್ತೆ. ಅಲ್ಲಾಹ್ ಗೆ ತೊಂದರೆ ಮಾಡುತ್ತಿದ್ದಿರಿ, ಮುಂಬೈನಲ್ಲಿ ಗಲಾಟೆ ಮಾಡಿದ್ರಿ ಹೀಗೆಲ್ಲಾ ಮೆಸೇಜ್ ಮಾಡಿದ್ದಾರೆ. ಇವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಇಲ್ಲಿ ಬಾಂಬ್ ಸ್ಕ್ವಾಡ್ ,ಡಾಗ್ ಸ್ಕ್ವಾಡ್ ಬಂದಿದೆ . ಇಲ್ಲಿವರೆಗೇ ಏನೂ ಸಿಕ್ಕಿಲ್ಲ. ಸದ್ಯ ಹದಿನೈದು ಶಾಲೆಗೆ ಮೇಲ್ ಬಂದಿದೆ . ಜನರಲ್ಲಿ ಆತಂಕ ಶುರುವಾಗಿದೆ ಎಂದು ಹೇಳಿದರು.

Advertisement

Advertisement
Next Article