For the best experience, open
https://m.bcsuddi.com
on your mobile browser.
Advertisement

ಶಾಲಾ ಬಸ್ಸಿನಲ್ಲಿ ಬೆಂಕಿ: 25 ಮಂದಿ ಸಜೀವ ದಹನ..!

11:26 AM Oct 02, 2024 IST | BC Suddi
ಶಾಲಾ ಬಸ್ಸಿನಲ್ಲಿ ಬೆಂಕಿ  25 ಮಂದಿ ಸಜೀವ ದಹನ
Advertisement

ಥಾಯ್ಲೆಂಡ್‌: ಥಾಯ್ಲೆಂಡ್‌ನ ಬ್ಯಾಂಕಾಕ್‌ನ ಪಥುಮ್ ಥಾನಿ ಪ್ರಾಂತ್ಯದಲ್ಲಿ ಶಾಲಾ ಬಸ್ಸಿಗೆ ಬೆಂಕಿ ಹೊತ್ತಿಕೊಂಡು ವಿದ್ಯಾರ್ಥಿಗಳು ಸೇರಿದಂತೆ 25 ಮಂದಿ ಸಜೀವ ದಹನಗೊಂಡಿರುವ ಘಟನೆ ಮಂಗಳವಾರ ವರದಿಯಾಗಿದೆ.

ಬಸ್ಸು ಮಧ್ಯೆ ಉತೈ ಥಾನಿ ಪ್ರಾಂತ್ಯದಿಂದ ಬ್ಯಾಂಕಾಕ್‌ಗೆ ಶಾಲಾ ಪ್ರವಾಸಕ್ಕೆ ವಿದ್ಯಾರ್ಥಿಗಳು ಸಹಿತ 44 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದಾಗ ರಾಜಧಾನಿಯ ಉತ್ತರ ಉಪನಗರವಾದ ಪಾಥುಮ್ ಥಾನಿ ಪ್ರಾಂತ್ಯದಲ್ಲಿ ಮಧ್ಯಾಹ್ನದ ಸುಮಾರಿಗೆ ಟಯರ್ ಸ್ಪೋಟಗೊಂಡು ತಡೆಬೇಲಿಗೆ ಗುದ್ದಿ ಬಸ್ಸಿಗೆ ಬೆಂಕಿ ಹೊತ್ತಿಕೊಂಡು ದುರಂತ ಸಂಭವಿಸಿದೆ ಎಂದು ಸಾರಿಗೆ ಸಚಿವ ಮಾಹಿತಿ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

ಘಟನಾ ಸ್ಥಳದ ತನಿಖೆಯನ್ನು ಪೂರ್ಣಗೊಳಿಸದ ಕಾರಣ ಅಧಿಕಾರಿಗಳು ಇನ್ನೂ ಸಾವಿನ ಸಂಖ್ಯೆಯನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಆಂತರಿಕ ಸಚಿವ ಅನುತಿನ್ ಚಾರ್ನ್‌ವಿರಾಕುಲ್ ಹೇಳಿದ್ದಾರೆ. ಆದರೆ ಬದುಕುಳಿದವರ ಸಂಖ್ಯೆಯನ್ನು ಆಧರಿಸಿ 25 ಜನ ಸತ್ತಿದ್ದಾರೆ ಎಂದು ಹೇಳಲಾಗಿದೆ.

Advertisement

ಬೆಂಕಿ ಹೊತ್ತಿಕೊಂಡ ಕೆಲವು ಗಂಟೆಗಳ ಬಳಿಕವೂ ಬಸ್ಸಿನೊಳಗೆ ಮಕ್ಕಳ ಚೀರಾಟ ಕೇಳುತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.

Author Image

Advertisement