For the best experience, open
https://m.bcsuddi.com
on your mobile browser.
Advertisement

ಶಾಲಾ-ಕಾಲೇಜು ದಿನಗಳಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಹೆಗ್ಗಡೆಯವರು ಬಳಸುತ್ತಿದ್ದ ಐಷಾರಾಮಿ ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು? ಅದೀಗ ಎಲ್ಲಿದೆ ಗೊತ್ತಾ?

10:44 AM May 02, 2024 IST | Bcsuddi
ಶಾಲಾ ಕಾಲೇಜು ದಿನಗಳಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ  ಹೆಗ್ಗಡೆಯವರು ಬಳಸುತ್ತಿದ್ದ ಐಷಾರಾಮಿ ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು  ಅದೀಗ ಎಲ್ಲಿದೆ ಗೊತ್ತಾ
Advertisement

ಮೈಸೂರು: ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಅವರು, ಶಾಲಾ-ಕಾಲೇಜುಗಳ ದಿನಗಳಲ್ಲಿ ಯಾವ ಕಾರಿನಲ್ಲಿ ಓಡಾಡುತ್ತಿದ್ದರು ಹಾಗೂ ಇದೀಗ ಈ ಕಾರು ಎಲ್ಲಿದೆ, ವಿಶೇಷತೆಗಳೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯೋಣ ಬನ್ನಿ.

ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಶಾಲಾ-ಕಾಲೇಜು ದಿನಗಳಲ್ಲಿ ಸಂಚಾರ ಮಾಡಲು ಬಳಸುತ್ತಿದ್ದ ಐಷಾರಾಮಿ ಕಾರು ಇದೀಗ ಮೈಸೂರಿನ “ಪಯಣ” ವಿಂಟೇಜ್‌ ಕಾರು ಮ್ಯೂಸಿಯಂನಲ್ಲಿ ವೀಕ್ಷಣೆಗಾಗಿ ಇಡಲಾಗಿದೆ. ಇನ್ನು ಈ ಕಾರಿಗೆ ವಿಶೇಷತೆಗಳೇನು ಎಂದು ಇಲ್ಲಿ ನೀಡಲಾಗಿದೆ.

Advertisement

ಧರ್ಮಸ್ಥಳ ಧರ್ಮಾಧಿಕಾರಿ & ರಾಜ್ಯಸಭಾ ಸದಸ್ಯರಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಧಾರ್ಮಿಕ ಚಟುವಟಿಕೆ ಜೊತೆ ಹಲವು ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದವರಾಗಿದ್ದಾರೆ. ಫೋಟೋಗ್ರಫಿ, ಕಾರು ಕ್ರೇಝ್‌ ಅಂತೂ ಅವರಲ್ಲಿ ಇನ್ನೂ ಕಡಿಮೆಯಾಗಿಲ್ಲ. ಇನ್ನು ಶಾಲೆ-ಕಾಲೇಜಿಗೆ ಹೋಗುವ ವೇಳೆ ಅವರ ಬಳಿ ಬ್ರಿಟನ್‌ ಮೂಲದ ನಿರ್ಮಾತೃ ಸಂಸ್ಥೆಯ “ಸ್ಟ್ಯಾಂಡರ್ಡ್‌ ಹೆರಾಲ್ಡ್‌” ಕಾರು ಇದ್ದು, ಇದೇ ಕಾರಿನಲ್ಲಿ ಅವರು ಶಾಲೆ-ಕಾಲೇಜಿಗೆ ಪಯಣ ಬೆಳೆಸುತ್ತಿದ್ದರು ಎಂದು ತಿಳಿದುಬಂದಿದೆ.

ಸಸ್ಯ ಸ್ಟ್ಯಾಂಡರ್ಡ್‌ ಹೆರಾಲ್ಡ್‌ ಕಾರು ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಟೈಯರ್‌ ಆಕಾರದಲ್ಲಿ ನಿರ್ಮಾಣ ಆಗಿರುವ “ಪಯಣ” ವಿಂಟೇಜ್‌ ಕಾರು ಮ್ಯೂಸಿಯಂನಲ್ಲಿ ವೀಕ್ಷಣೆಗಾಗಿ ಇಡಲಾಗಿದೆ. ಕಪ್ಪು ಬಣ್ಣದ “ಸ್ಟ್ಯಾಂಡರ್ಡ್‌ ಹೆರಾಲ್ಡ್”‌ ಈಗಲೂ ತನ್ನ ಹಳೆಯ ಗತ್ತನ್ನು ಕಳೆದುಕೊಂಡಿಲ್ಲ. ಇದು ನೋಡುಗರನ್ನು ಹೊಸ ಕ್ರಷ್ ಹುಡುಗಿಯಂತೆ ತನ್ನತ್ತ ಸೆಳೆಯುತ್ತಲೇ ಇದೆ.

ಇನ್ನು 1962ರ ಮಾಡೆಲ್‌ನ ಈ ಕಾರು ತನ್ನ ಹಳೇ ವರ್ಚಸ್ಸನ್ನು ಮಾತ್ರ ಕಳೆದುಕೊಳ್ಳದೆ, ನೋಡುಗರನ್ ಸೆಳೆಯುತ್ತಿದೆ. ಆ ಕಾಲದಲ್ಲೇ ಐಷಾರಾಮಿ ಕಾರು ಆಗಿದ್ದ ಸ್ಟ್ಯಾಂಡರ್ಡ್‌ ಹೆರಾಲ್ ಈಗಲೂ ಕೂಡ ಅದೇ ಗತ್ತನ್ನು ಉಳಿಸಿಕೊಂಡಿದೆ ಎನ್ನುತ್ತಿದ್ದಾರೆ ನೋಡುಗರು. ನೀವು ಕೂಡಾ ಮೈಸೂರು ಕಡೆಗೆ ಪಯಣ ಬೆಳೆಸಿದರೆ “ಪಯಣ” ವಿಂಟೇಜ್‌ ಕಾರು ಮ್ಯೂಸಿಯಂಗೆ ಒಮ್ಮೆ ಎಂಟ್ರಿ ಕೊಡಿ.

Author Image

Advertisement