ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ವ್ಯಸನಿ ತಂದೆಯಿಂದ ತಾಯಿಗೆ ಕಿರುಕುಳ: ತಂದೆಯನ್ನೇ ಹತ್ಯೆಗೈದ ಮಗ

01:11 PM Nov 06, 2023 IST | Bcsuddi
Advertisement

ರಾಯಚೂರು: ತಾಯಿಗೆ ನೀಡುತ್ತಿದ್ದ ಚಿತ್ರಹಿಂಸೆ ನೀಡುತ್ತಿದ್ದ, ಮದ್ಯ ಹಾಗೂ ಮಾದಕ ವಸ್ತು ವ್ಯಸನಿಯಾದ ತಂದೆಯನ್ನು ಕೋಪದ ಭರದಲ್ಲಿ ಕಲ್ಲನ್ನು ಎತ್ತಿಹಾಕಿ ಕೊಲೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ.

Advertisement

ಲಿಂಗಸುಗೂರು ತಾಲೂಕಿನ ದೇವರಭೂಪೂರಿನಲ್ಲಿ ಘಟನೆ ನಡೆದಿದ್ದು, ತಂದೆ ಬಂಡಿ ತಿಮ್ಮಣ್ಣ(55)ನನ್ನೇ ಪುತ್ರ ಶೀಲವಂತ ಕೊಲೆಗೈದಿದ್ದಾನೆ.

ತಂದೆ ಬಂಡಿ ತಿಮ್ಮಣ್ಣ ಪ್ರತಿ ದಿನ ಗಾಂಜಾ, ಮದ್ಯ ಸೇವಿಸಿ ತಾಯಿಗೆ ನಿತ್ಯ ಕಿರುಕುಳ ನೀಡುತ್ತಿದ್ದ. ಇದನ್ನು ನೋಡಲಾಗದೆ ಕಲ್ಲು ಎತ್ತಿಹಾಕಿ ತಂದೆಯನ್ನು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಮೊದಲು ತಂದೆ ಕೊಲೆಗೈದು ಪ್ರಕರಣ‌ ಮುಚ್ಚಿ ಹಾಕಲು ಯತ್ನಿಸಿದ್ದ. ಮೃತದೇಹ ತೀವ್ರ ರಕ್ತಸಿಕ್ತವಾದ್ದರಿಂದ ಅನಿವಾರ್ಯವಾಗಿ ಪೊಲೀಸರಿಗೆ ಮಾಹಿತಿ ನೀಡಬೇಕಾಯಿತು. ನಿತ್ಯ ಕುಡಿದು ಬಂದು ತಾಯಿಗೆ, ಕುಟುಂಬಸ್ಥರಿಗೆ ಕಿರುಕುಳ ನೀಡುತ್ತಿದ್ದ ಹಿನ್ನೆಲೆ ತಾಯಿಯ ನೋವನ್ನು ಸಹಿಸಲಾಗದೇ ತಂದೆಯನ್ನು ಕೊಂದಿದ್ದಾಗಿ ಆರೋಪಿ ಶೀಲವಂತ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಲಿಂಗಸುಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement
Next Article