For the best experience, open
https://m.bcsuddi.com
on your mobile browser.
Advertisement

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಭಾರತದ ಪ್ರತಿನಿಧಿ

12:18 PM Sep 28, 2024 IST | BC Suddi
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಭಾರತದ ಪ್ರತಿನಿಧಿ
Advertisement

ನವದೆಹಲಿ :ಭಾರತದ ಆಕ್ರಮಣಕಾರಿ ಮಹತ್ವಾಕಾಂಕ್ಷೆಗಳು ಪ್ರಾದೇಶಿಕ ಶಾಂತಿಗೆ ಅಪಾಯವನ್ನು ಉಂಟುಮಾಡುತ್ತದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಶುಕ್ರವಾರ ಹೇಳಿದ್ದರು. ಇದಕ್ಕೆ ವಿಶ್ವಸಂಸ್ಥೆಯಲ್ಲಿ ಭಾರತದ ಪರ್ಮನೆಂಟ್​ ಮಿಷನ್​​ನ ಮೊದಲ ಕಾರ್ಯದರ್ಶಿ ಭಾವಿಕಾ ಮಂಗಳಾನಂದನ್ ಶನಿವಾರ ತಿರುಗೇಟು ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗ’ ಎಂದು ಭಾವಿಕಾ ಮಂಗಳಾನಂದನ್ ಹೇಳಿದ್ದಾರೆ. ಸುದೀರ್ಘ ಕಾಲದಿಂದ ನೆರೆ ದೇಶಗಳ ವಿರುದ್ಧ ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವುದು ಜಗತ್ತಿಗೇ ತಿಳಿದಿರುವ ವಿಚಾರ. ಪಾಕಿಸ್ತಾನದ ಭಯೋತ್ಪಾದಕರು ನಮ್ಮ ಸಂಸತ್​​ನ ಮೇಲೆ, ವಾಣಿಜ್ಯ ನಗರಿ ಮುಂಬೈಯ ಮೇಲೆ,ಮಾರುಕಟ್ಟೆಗಳ ಮೇಲೆ ಹಾಗೂ ಧಾರ್ಮಿಕ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.

ಅಂತಹ ದೇಶ ಹಿಂಸಾಚಾರದ ವಿರುದ್ಧ ಮಾತನಾಡುವುದೇ ಒಂದು ವಿರೋಧಾಭಾಸ. ಸರಿಯಾಗಿ ಚುನಾವಣೆ ನಡೆಸಿದ ಇತಿಹಾಸವನ್ನೇ ಹೊಂದಿರದ, ಸೇನಾ ಆಡಳಿತ ಹೊಂದಿರುವ ದೇಶ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿ ಆಡಳಿತ ನಡೆಸುತ್ತಿರುವ ನೆರೆ ದೇಶದ ರಾಜಕೀಯ ನಿರ್ಧಾರಗಳನ್ನು ಪ್ರಶ್ನಿಸುವುದು ಹಾಸ್ಯಾಸ್ಪದ ಎಂಬುವುದಾಗಿ ಅವರು ತಿರುಗೇಟು ನೀಡಿದರು.

Advertisement

Author Image

Advertisement