ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ವಿವಾಹಿತ ಮಹಿಳೆಯೊಂದಿಗೆ ಯುವಕನ ಫೊಟೊ ವೈರಲ್,‌ ಮನನೊಂದು ಇಬ್ಬರೂ ಆತ್ಮಹತ್ಯೆಗೆ ಶರಣು..!

05:17 PM Dec 20, 2023 IST | Bcsuddi
Advertisement

ಮೈಸೂರು: ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ತಮ್ಮ ಫೋಟೊ ವೈರಲ್ ಆಗಿದ್ದರಿಂದ ಮನನೊಂದು ಯುವಕ ಮತ್ತು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಪಟ್ಟಣದ ಕಲ್ಗುಣಿಗೆ ನಿವಾಸಿಗಳಾದ 28 ವರ್ಷದ ವಿವಾಹಿತೆ ಶೃತಿ ಮತ್ತು 20 ವರ್ಷದ ಮುರಳಿ ಮೃತ ದುರ್ದೈವಿಗಳು. ವಿವಾಹಿತ ಮಹಿಳೆ ಜೊತೆ ಯುವಕ ಸಲುಗೆಯಿಂದ ಇದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​​ ಆಗಿದೆ. ಫೋಟೋ ಕಣ್ಣಿಗೆ ಬೀಳುತ್ತಿದ್ದಂತೆ ಮನನೊಂದ ಗೃಹಿಣಿ ಶೃತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೃತಿ ಆತ್ಮಹತ್ಯೆ ಬೆನ್ನಲ್ಲೇ ಮುರಳಿ ಕೂಡ ನೇಣಿಗೆ ಶರಣಾಗಿದ್ದಾನೆ. ಮುರಳಿ, ತಾನು ಶೃತಿ ಜೊತೆ ಇದ್ದ ಫೋಟೋವನ್ನು ಅಪ್​ಲೋಡ್ ಮಾಡಿ ​​​ಸ್ಟೇಟಸ್​ನಲ್ಲಿ ಇಟ್ಟುಕೊಂಡಿದ್ದ. ಈ ಫೋಟೋ ವೈರಲ್ ಆಗಿದೆ. ಬಳಿಕ ಇದು ಶೃತಿ ಹಾಗೂ ಮುರಳಿ ಮನೆಯವರಿಗೂ ಮುಟ್ಟಿದೆ. ಇದೇ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಜಗಳವಗಿದೆ. ಇದರಿಂದ ಹೆದರಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಬ್ಬರ ನಡುವೆ ಅನೈತಿಕ ಸಂಬಂಧವಿದೆಯೇ ಎಂಬುದು ತಿಳಿದಿಲ್ಲ. ಎರಡೂ ಕುಟುಂಬಗಳು ಹುಣಸೂರು ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಿಸಿದ್ದು, ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

Advertisement
Next Article