ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ವಿಧಾನಸಭೆಯಲ್ಲಿ ಹಲವು ಮಹತ್ವದ ವಿಧೇಯಕ್ಕೆ ಅಂಗೀಕಾರ

06:34 PM Jul 26, 2024 IST | Bcsuddi
Advertisement

ಬೆಂಗಳೂರು: ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಕಂದಾಯ ಇಲಾಖೆಯಲ್ಲಿ ಆಯುಕ್ತಾಲಯ ರಚಿಸುವ ವಿಧೇಯಕ ಸೇರಿದಂತೆ ಹಲವು ಮಹತ್ವದ ವಿಧೇಯಕಗಳು ಅಂಗೀಕಾರಗೊಂಡವು. ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲದ ನಡುವೆಯೂ ಕರ್ನಾಟಕ ಭೂ ಕಂದಾಯ ವಿಧೇಯಕ 2ನೇ ತಿದ್ದುಪಡಿ, ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತು ಇತರೆ ಕೆಲವು ಕಾನೂನು ತಿದ್ದುಪಡಿ ವಿಧೇಯಕ, ಸರ್ಕಾರಿ ಉದ್ಯಾನವನಗಳ ಸಂರಕ್ಷಣಾ ವಿಧೇಯಕಗಳು ಸರ್ವಾನುಮತದಿಂದ ಅಂಗೀಕಾರಗೊಂಡವು.

Advertisement

ವೈದ್ಯಕೀಯ ಶಿಕ್ಷಣದ ಕೋರ್ಸ್ ಗಳಿಗೆ ಪ್ರವೇಶ ನೀಡಲು ಅನುಸರಿಸುತ್ತಿರುವ ನೀಟ್ ಪರೀಕ್ಷಾ ವ್ಯವಸ್ಥೆಯಿಂದ ಕರ್ನಾಟಕಕ್ಕೆ ವಿನಾಯಿತಿ ನೀಡಬೇಕು ಮತ್ತು ಸಿಇಟಿ ಅಂಕಗಳನ್ನು ಆಧರಿಸಿ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ನೀಡಬೇಕು ಹಾಗೂ ಅನುಸೂಚಿತ ಬುಡಕಟ್ಟು ಸಮುದಾಯಗಳಿಗೆ ಅರಣ್ಯದ ಹಕ್ಕುಗಳನ್ನು ನೀಡಬೇಕು ಎಂದು ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನು ಕೂಡ ಸರ್ವಾನುಮತದಿಂದ ಸದನದಲ್ಲಿ ಅಂಗೀಕಾರಗೊಂಡಿತು.

ವಿಧಾನಪರಿಷತ್ತಿನಲ್ಲೂ 6 ಪ್ರಮುಖ ವಿಧೇಯಕಗಳು ಮಂಡನೆಗೊಂಡು ಅಂಗೀಕಾರಗೊಂಡಿವೆ.ನಂತರ ಉಭಯ ಸದನಗಳು ಅನಿರ್ಧಿಷ್ಟಾ ವಧಿಗೆ ಮುಂದೂಡಲ್ಪಟವು

 

Advertisement
Next Article