For the best experience, open
https://m.bcsuddi.com
on your mobile browser.
Advertisement

ವಿಚ್ಛೇದಿತ ಮುಸ್ಲಿಂ ಮಹಿಳೆ ಮರುವಿವಾಹವಾದರೂ ಜೀವನಾಂಶಕ್ಕೆ ಅರ್ಹಳು-ಮುಂಬೈ ಹೈಕೋರ್ಟ್‌

03:13 PM Jan 07, 2024 IST | Bcsuddi
ವಿಚ್ಛೇದಿತ ಮುಸ್ಲಿಂ ಮಹಿಳೆ ಮರುವಿವಾಹವಾದರೂ ಜೀವನಾಂಶಕ್ಕೆ ಅರ್ಹಳು ಮುಂಬೈ ಹೈಕೋರ್ಟ್‌
Advertisement

ವಿಚ್ಛೇದನ ಪಡೆದ ಮುಸ್ಲಿಂ ಮಹಿಳೆ ಮರು ವಿವಾಹವಾದರೂ ಮುಸ್ಲಿಂ ಮಹಿಳೆಯರ (ವಿಚ್ಛೇನ ವೇಳೆ ಹಕ್ಕುಗಳ ರಕ್ಷಣೆ) ಕಾಯ್ದೆ-1986ರ ಅನ್ವಯ ತನ್ನ ಮಾಜಿ ಪತಿಯಿಂದ ಜೀವನಾಂಶ ಪಡೆಯಲು ಅರ್ಹಳು ಎಂದು ಮುಂಬೈ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಕಾಯ್ದೆಯ ಪ್ರಕಾರ, ವಿಚ್ಛೇದಿತ ಮಹಿಳೆ ಮರು ವಿವಾಹವಾದರೂ, ನ್ಯಾಯಸಮ್ಮತ ಜೀವನಾಂಶವನ್ನು ಪಡೆಯಲು ಅರ್ಹಳ ಸೆಕ್ಷನ್ 3(1)(ಎ) ಅನ್ವಯ ಪತಿ ಮತ್ತು ಪತ್ನಿಯ ನಡುವೆ ವಿಚ್ಛೇದನ ಆಗಿದೆ ಎಂಬ ಅಂಶವಷ್ಟೇ ಜೀವನಾಂಶ ಕೋರಲು ಪತ್ನಿಗೆ ಅರ್ಹತೆ ನೀಡುತ್ತದೆ. ಇಂಥ ಅರ್ಹತೆಯು ವಿಚ್ಛೇದನವಾದ ದಿನಾಂಕದಂದೇ ಬರುತ್ತದೆ" ಎಂದು ನ್ಯಾಯಮೂರ್ತಿ ರಾಜೇಶ್ ಪಾಟೀಲ್ ಅವರು ತಮ್ಮ ಜನವರಿ 2ರ ತೀರ್ಪಿನಲ್ಲಿ ಸ್ಪಷ್ಟಪಡಿಸಿದ್ದಾರೆ.

Advertisement
Author Image

Advertisement