For the best experience, open
https://m.bcsuddi.com
on your mobile browser.
Advertisement

ವಾಹನ ಸವಾರರೇ ಟೋಲ್‌ ಶುಲ್ಕದ ವಿಚಾರದಲ್ಲಿ ಮೋಸ ಹೋಗುತ್ತಿದ್ದೀರಾ..? ಈ ವಿಚಾರವನ್ನು ಮಿಸ್ಓ ಮಾಡದೆ ಓದಿ

11:16 AM May 03, 2024 IST | Bcsuddi
ವಾಹನ ಸವಾರರೇ ಟೋಲ್‌ ಶುಲ್ಕದ ವಿಚಾರದಲ್ಲಿ ಮೋಸ ಹೋಗುತ್ತಿದ್ದೀರಾ    ಈ ವಿಚಾರವನ್ನು ಮಿಸ್ಓ ಮಾಡದೆ ಓದಿ
Advertisement

ಟೋಲ್‌ ಶುಲ್ಕದ ವಿಚಾರದಲ್ಲಿ ತುಂಬಾ ವಾಹನ ಸವಾರು ತಮಗೆ ಗೊತ್ತಿಲ್ಲದೆ ಮೋಸ ಹೋಗುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಲೇ ಇವೆ. ಹೇಗೆಲ್ಲ ಮೋಸ ಆಗುತ್ತದೆ, ಈ ಸಮಸ್ಯೆಯಿಂದ ಮುಕ್ತರಾಗಬೇಕೆಂದರೆ ಯಾವೆಲ್ಲ ಸರಳ ಮಾರ್ಗಗಳನ್ನು ಅನುಸರಿಸಬೇಕು ಎನ್ನುವ ಮಾಹಿತಿಯನ್ನು ತಿಳಿಯಬೇಕೆ? ಹಾಗಾದರೆ ನೀವು ಇಲ್ಲಿ ನೀಡಿರುವ ಸುದ್ದಿಯನ್ನು ಮಿಸ್‌ ಮಾಡದೇ ಓದಿ.

ನೀವು ಟೋಲ್‌ ಪ್ಲಾಜಾದಲ್ಲಿ ಹೋಗುವಾಗ ಅಲ್ಲಿನ ಸ್ಕ್ಯಾನರ್ ನಿಮ್ಮ ವಾಹನದ ಪಾಸ್ಟ್ಯಾಗ್‌ ಅನ್ನು ರೀಡ್‌ ಮಾಡದಿದ್ದರೆ, ಅಲ್ಲಿನ ಸಿಬ್ಬಂದಿ ಮೊದಲು ಹೇಳುವುದೇ ಪಾಸ್ಟ್ಯಾಟ್‌ ರೀಡ್‌ ಆಗುತ್ತಿಲ್ಲ ಹಣ ಕಟ್ಟಿ ಅಂತಾ. ಇಂತಹ ಸಂದರ್ಭದಲ್ಲಿ ಪರಿಹಾರೋಪಾಯಕ್ಕಾಗಿ ಏನು ಮಾಡಬಹುದು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಸರ್ಕಾರಿ ನಿಯಮದ ಪ್ರಕಾರ, ನಿಮ್ಮ ಪಾಸ್ಟ್ಯಾಗ್‌ನಲ್ಲಿ ಹಣ ಇದ್ದು, ಈ ವೇಳೆ ಪಾಸ್ಟ್ಯಾಗ್‌ ರೀಡ್‌ ಮಾಡದಿದ್ದರೆ, ನೀವು ಅವರಿಗೆ ಯಾವುದೇ ರೀತಿಯಲ್ಲಿಯೂ ಹಣ ಕಟ್ಟುವ ಅವಶ್ಯಕತೆ ಇರುವುದಿಲ್ಲ. ಬದಲಿಗೆ ಟೋಲ್‌ ಕ್ರಾಸ್‌ ಮಾಡಿ ಆ ಒಂದು ರಸ್ತೆಯಲ್ಲಿ ಮುಂದಕ್ಕೆ ಹೋಗಬಹುದಾಗಿದೆ. ಟೋಲ್‌ ಪ್ಲಾಜಾದ ಸಿಬ್ಬಂದಿ ಸುಮ್ಮನಿದ್ದರೆ ಸರಿ. ಒಂದು ವೇಳೆ ಹಣ ಕಟ್ಟಲೇಬೇಕು ಎಂದು ಕಿರಿಕ್‌ ಮಾಡಿದ್ದೇ ಆದಲ್ಲಿ, ನೀವು ತಕ್ಷಣ ಟೋಲ್‌ ಪ್ರೀ ನಂಬರ್ 1033 ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲು ಮಾಡಬಹುದು. ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಣ ಕೇಳಿದವರ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಯಮದ ಪ್ರಕಾರ, ಟೋಲ್‌ ಪ್ಲಾಜಾದಲ್ಲಿರುವ ವೇಟಿಂಗ್‌ ಟೈಮ್‌ 10 ಸೆಕೆಂಡ್‌ಗಿಂತ ಹೆಚ್ಚಾಗಿದ್ದರೆ ಅಥವಾ ವೇಟಿಂಗ್‌ ಕ್ಯೂ 100 ಮೀಟರ್‌ಗಿಂತ ಹೆಚ್ಚಿದ್ದರೆ, ನೀವು ಯಾವುದೇ ಟೋಲ್‌ ಹಣ ನೀಡದೆ ಉಚಿತವಾಗಿ ಮುಂದೆ ಸಾಗಬಹುದಾಗಿದೆ. ಈ ಬಗ್ಗೆ ಮಾಹಿತಿ ಇಲ್ಲದೆ ಅದೆಷ್ಟೋ ಜನರು ಪ್ರತಿನಿತ್ಯವೂ ಮೋಸ ಹೋಗುತ್ತಿದ್ದಾರೆ. ಈ ನಿಯಮಗಳು ಜಾರಿಯಾಗಬೇಕೆಂದರೆ ವಾಹನ ಸವಾರರು ಇಂತಹ ಸಮಸ್ಯೆಗಳ ಬಗ್ಗೆ ಪ್ರಶ್ನಿಸಬೇಕಾಗುತ್ತದೆ. ಆಗ ಮಾತ್ರ ಇಂತಹ ಸಮಸ್ಯೆಗಳು ಉದ್ಭವವಾಗುವುದಿಲ್ಲ.

Advertisement

Author Image

Advertisement