For the best experience, open
https://m.bcsuddi.com
on your mobile browser.
Advertisement

ವಾಹನ ಸವಾರರೇ ಗಮನಿಸಿ - ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಹೆಚ್ಚು ಹೊತ್ತು ವಾಹನ ನಿಲ್ಲಿಸಿದ್ರೆ ಹೆಚ್ಚಿನ ಶುಲ್ಕ..!

03:02 PM May 21, 2024 IST | Bcsuddi
ವಾಹನ ಸವಾರರೇ ಗಮನಿಸಿ   ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಹೆಚ್ಚು ಹೊತ್ತು ವಾಹನ ನಿಲ್ಲಿಸಿದ್ರೆ ಹೆಚ್ಚಿನ ಶುಲ್ಕ
Advertisement

ಬೆಂಗಳೂರು : ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬರುವ ವಾಹನ ಸವಾರರೇ ಗಮನಿಸಿ. ಏರ್‌ಪೋರ್ಟ್‌ನ ಪಾರ್ಕಿಂಗ್‌ನಲ್ಲಿ ಹೆಚ್ಚು ಹೊತ್ತು ವಾಹನ ನಿಲ್ಲಿಸಿದರೆ ಬೀಳಲಿದೆ ಹೆಚ್ಚಿನ ಶುಲ್ಕದ ಹೊರೆ.

ಹೌದು, ವಾಹನಗಳ ದಟ್ಟಣೆ ನಿಯಂತ್ರಿಸಲು ಮೇ 20 ಸೋಮವಾರದಿಂದಲೇ ಈ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಖಾಸಗಿ ವಾಹನಗಳಿಗೆ ಭಾರೀ ಶುಲ್ಕದ ವ್ಯವಸ್ಥೆ ಶುರುವಾಗಿದೆ. ವಿಮಾನ ನಿಲ್ದಾಣಕ್ಕೆ ನಿಮ್ಮ ಕುಟುಂಬದವರು, ಪರಿಚಯಸ್ಥರನ್ನು ಬಿಟ್ಟು ಬರಲು ಹೋದರೂ ಶುಲ್ಕ ತೆರಲೇಬೇಕು. ನಿತ್ಯ ಸಾವಿರಾರು ಕ್ಯಾಬ್‌ಗಳು ವಿಮಾನ ನಿಲ್ದಾಣಕ್ಕೆ ತೆರಳಲಿದ್ದು. ಆ ವಾಹನಗಳಿಗೂ ನಿಮಿಷದ ಲೆಕ್ಕದಲ್ಲಿ ಶುಲ್ಕ ನಿಗದಿಪಡಿಸಲಾಗಿದೆ. ಹಳದಿ ಬೋರ್ಡ್‌ ನ ಯಾವುದೇ ವಾಹನಗಳು ಒಂದು ಮತ್ತು ಎರಡನೇ ಲೇನ್‌ಗೆ ಬರುವವರು 150 ರೂ. ಪಾವತಿಸಬೇಕು. ಅದು ಏಳು ನಿಮಿಷಕ್ಕೆ ಮಾತ್ರ, ಏಳು ನಿಮಿಷದಿಂದ ಮತ್ತೆ ಏಳು ನಿಮಿಷದವರೆಗೆ ನಂತರದ 150 ರೂ. ಪಾವತಿಸಬೇಕು. ವೈಟ್‌ ಬೋರ್ಡ್‌ನವರಿಗೆ ಏಳು ನಿಮಿಷದವರೆಗೆ ಯಾವುದೇ ಶುಲ್ಕವಿಲ್ಲ.

ಆನಂತರದ ಏಳು ನಿಮಿಷಕ್ಕೆ ಆ ವಾಹನಗಳಿಗೂ 150 ರೂ. ಶುಲ್ಕ ತುಂಬಬೇಕು. ಇನ್ನು, ಬಸ್‌ಗಳು ವಿಮಾನನಿಲ್ದಾಣ ಟರ್ಮಿನಲ್‌ ಪ್ರವೇಶಿಸಲು 600 ರೂ. ಪಾವತಿ ಮಾಡಬೇಕು. ಅದೇ ರೀತಿ ಟೆಂಪೋ ಟ್ರಾವಲರ್‌ ಗಳಿಗೆ 300 ರೂ.ಗಳನ್ನು ನಿಗದಿ ಮಾಡಲಾಗಿದೆ. ಬಸ್‌ ಹಾಗೂ ಟೆಂಪೋ ಟ್ರಾವಲರ್‌ಗಳು ಮೂರನೇ ಲೇನ್‌ನಲ್ಲಿಯೇ ಕಡ್ಡಾಯವಾಗಿ ಬರಬೇಕು ಎನ್ನುವ ಹೊಸ ಆದೇಶ ಮಾಡಲಾಗಿದೆ.

Advertisement

ವಿಮಾನ ನಿಲ್ದಾಣದಲ್ಲಿ 15 ನಿಮಿಷಕ್ಕೂ ಹೆಚ್ಚು ಅವಧಿಗೆ ನಿಲ್ಲಿಸುವ ವಾರಸುದಾರರು ಇಲ್ಲದ ವಾಹನಗಳನ್ನು ಸಮೀಪದ ಪೊಲೀಸ್‌ ಠಾಣೆಗೆ ಹಸ್ತಾಂತರಿಸಲಾಗುವುದು ಎಂದು ವಾಹನಗಳ ಮಾಲೀಕರಿಗೆ ತಿಳಿಸಲಾಗಿದೆ. ಸುಖಾಸುಮ್ಮನೇ ಗಂಟೆಗಟ್ಟಲೇ ವಿಮಾನ ನಿಲ್ದಾಣಗಳ ಟರ್ಮಿನಲ್‌ಗಳಲ್ಲಿ ವಾಹನ ನಿಲ್ಲಿಸುವುದನ್ನು ನಿಗ್ರಹಿಸಲು ಕಠಿಣ ಕ್ರಮ ಹಾಗೂ ಶುಲ್ಕ ವಿಧಿಸುವುದು ಅನಿವಾರ್ಯವೂ ಆಗಿದೆ ಎನ್ನುವುದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ಅಧಿಕಾರಿಗಳ ವಿವರಣೆ.

Author Image

Advertisement