ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ವಾಲ್ಮೀಕಿ ನಿಗಮದ ಹಣ ಎಣ್ಣೆ ಖರೀದಿಗೆ ಬಳಕೆಯಾಗಿದೆ : ಗುಟ್ಟನ್ನ ರಟ್ಟು ಮಾಡಿದ ಇ.ಡಿ

12:27 PM Jul 18, 2024 IST | Bcsuddi
Advertisement

ಬೆಂಗಳೂರು : ವಾಲ್ಮೀಕಿ ನಿಗಮ ಹಗರಣದ ಅಕ್ರಮ ಹಣ ವರ್ಗಾವಣೆ ಆರೋಪದಡಿ ಮಾಜಿ ಸಚಿವ ಬಿ.ನಾಗೇಂದ್ರನನ್ನ ಬಂಧಿಸಿ ವಿಚಾರಣೆಗೊಳಪಡಿಸಿರುವ ಜಾರಿ ನಿರ್ದೇಶಾನಾಲಯ ಅಧಿಕಾರಿಗಳ ವಿಚಾರಣೆಯಲ್ಲಿ ನಿಗಮ ಖಾತೆಯಿಂದ ವರ್ಗಾವಣೆಯಾಗಿದ್ದ ಸುಮಾರು 89.65 ಕೋಟಿ ಹಣವನ್ನ ಮದ್ಯ ಹಾಗೂ ದುಬಾರಿ ಬೆಲೆಯ ಕಾರು ಖರೀದಿಗೆ ಬಳಸಲಾಗಿದೆ ಎಂದು‌ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿನ 89.65 ಕೋಟಿ ಅವ್ಯವಹಾರ ನಡೆದಿದೆ. ಈ ಸಂಬಂಧ ನಾಲ್ಕು ರಾಜ್ಯಗಳಲ್ಲಿ ಏಕಕಾಲದಲ್ಲಿ 23 ಕಡೆ ದಾಳಿ ಮಾಡಲಾಗಿದೆ.‌ ಒಟ್ಟು 18 ನಕಲಿ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ. ನಂತರ ಈ ಹಣವೂ ಹಲವು ನಕಲಿ ಬ್ಯಾಂಕ್ ಖಾತೆಗಳಿಗೆ ವರ್ಗವಾಗಿ ನಗದಾಗಿ ಪರಿವರ್ತಿಸಲಾಗಿದೆ. ಈ ಸಂಬಂಧ ಮಾಜಿ ಸಚಿವ ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮನೆಯಲ್ಲಿ ಮಹತ್ವದ ದಾಖಲೆಗಳು ಪತ್ತೆಯಾಗಿವೆ.‌ ಇದೇ ಆರೋಪದಡಿ ನಾಗೇಂದ್ರನನ್ನ ಬಂಧಿಸಲಾಗಿದೆ. ಹಗರಣದ ಹಣವನ್ನ ಚುನಾವಣೆ ಹಾಗೂ ಐಷಾರಾಮಿ ಕಾರು ಖರೀದಿ ಮಾಡಲು ಸಹ ಬಳಕೆ ಮಾಡಲಾಗಿದೆ. ಚುನಾವಣೆಯಲ್ಲಿ ನಿಗಮದ ಹಣವನ್ನ ಮದ್ಯ ಖರೀದಿ ಮಾಡಲು ಬಳಸಲಾಗಿದೆ ಎಂದು ಇ‌.ಡಿ ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದೆ. ಇ.ಡಿ.ಅಧಿಕಾರಿಗಳ ವಶದಲ್ಲಿದ್ದ ಬಂಧಿತ ನಾಗೇಂದ್ರ ಪತ್ನಿ ಮಂಜುಳಾ ಅವರನ್ನ ವಶಕ್ಕೆ ಪಡೆದು ಆರು ಗಂಟೆ ಕಾಲ ವಿಚಾರಣೆ ನಡೆಸಲಾಯಿತು. ವಿಚಾರಣೆ ಅಂತ್ಯವಾದ ಹಿನ್ನೆಲೆಯಲ್ಲಿ ಕಾರಿನಲ್ಲಿ ಅವರ ಮನೆಗೆ ಕರೆದೊಯ್ದರು ಬಿಟ್ಟು ಬಂದರು.

Advertisement

Advertisement
Next Article