ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ವಾಲ್ಮೀಕಿ ನಿಗಮದ ಅಕ್ರಮದಲ್ಲಿ ಮಾಜಿ ಸಚಿವರಿಗೆ ಢವಢವ - ನಾಗೇಂದ್ರ ಪಿಎಸ್‌ಗೆ ಎಸ್‌ಐಟಿ ಡ್ರಿಲ್

09:28 AM Jul 05, 2024 IST | Bcsuddi
Advertisement

ಬೆಂಗಳೂರು: ವಾಲ್ಮೀಕಿ ನಿಗಮ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರಗೆ ಢವಢವ ಶುರುವಾಗಿದೆ. ಈಗಾಗಲೇ ನಿಗಮದ ಎಂಡಿ, ಪದ್ಮನಾಭ ಮತ್ತು ಅಕೌಟೆಂಟ್ ಪರಶುರಾಮ್ ಬಂಧನವಾಗಿದ್ದಾರೆ.‌ ಇದರ ಜೊತೆಗೆ ಖಾಸಗಿ ವ್ಯಕ್ತಿಗಳಾದ ಪ್ರಕರಣದ ಕಿಂಗ್ ಪಿನ್ ಸತ್ಯನಾರಾಯಣ ರಾವ್, ಸಾಯಿ ತೇಜ ಅರೆಸ್ಟ್ ಆಗಿದ್ದಾರೆ. ಅಕ್ರಮವಾಗಿ ಆಂಧ್ರದ ಫಸ್ಟ್ ಬ್ಯಾಂಕ್ ಎಂಡಿಗೆ ಮಾಜಿ ಸಚಿವ ನಾಗೇಂದ್ರ ಅವರ ಪರ್ಸನಲ್ ಸೆಕ್ರೆಟರಿ (ಪಿಎಸ್) ಆಗಿದ್ದ ದೇವೇಂದ್ರಪ್ಪ ರನ್ನ ಎಸ್‌ಐಟಿ ವಿಚಾರಣೆ ನಡೆಸಿದೆ. ಅಕ್ರಮವಾಗಿ ಕೋಟಿ ಕೋಟಿ ಹಣ ಪಡೆದಿರೋದಾಗಿ ಸತ್ಯನಾರಾಯಣ ರಾವ್ ಹೇಳಿದ್ದ. ಹೀಗಾಗಿ ಪಿಎಸ್ ದೇವೇಂದ್ರಪ್ಪಗೆ ಎಸ್‌ಐಟಿ ನೋಟೀಸ್ ನೀಡಿ ವಿಚಾರಣೆ ನಡೆಸಿದೆ. ಇನ್ನು ವಿಚಾರಣೆ ವೇಳೆ ದೇವೇಂದ್ರಪ್ಪ 4.4 ಕೋಟಿ ಹಣವನ್ನ ನೀಡಿರುವುದು ಬೆಳಕಿಗೆ ಬಂದಿದೆ. ಈ ಹಣದಲ್ಲಿ ಈಗಾಗಲೇ 4 ಕೋಟಿ ರಿಕವರಿಯಾಗಿದ್ದು, ಇನ್ನೂ ಸುಮಾರು 40 ಲಕ್ಷ ಹಣ ರಿಕವರಿಯಾಗದೆ ಬೇಕಿದೆ. ಪಿಎಸ್ ದೇವೇಂದ್ರಪ್ಪ ಆಗಲಿ ಉಳಿದ ಆರೋಪಿಗಳು ಸಚಿವರಾಗಿದ್ದ ನಾಗೇಂದ್ರ ಹೆಸರನ್ನು ಬಾಯಿ ಬಿಡ್ತಿಲ್ಲ. ಇನ್ನು ನಿನ್ನೆ ದೇವೇಂದ್ರಪ್ಪ ವಿಚಾರಣೆ ನಡೆಸಿ ಅಗತ್ಯ ಬಿದ್ದರೆ ಮತ್ತೆ ವಿಚಾರಣೆಗೆ ಕರೆಸೋ ಸಾಧ್ಯತೆಯಿದೆ. ಇಂದು ನಿಗಮದ ಗದ್ದಲ್ ಪಿಎಸ್ ಹಂಪಣ್ಣಗೂ ಎಸ್‌ಐಟಿ ನೋಟೀಸ್ ನೀಡಿದ್ದು ಇಂದು ಹಂಪಣ್ಣ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.

Advertisement

Advertisement
Next Article