For the best experience, open
https://m.bcsuddi.com
on your mobile browser.
Advertisement

ವಾಯುಪಡೆಯ ವಾಹನದ ಮೇಲೆ ದಾಳಿ ನಡೆಸಿದ ಉಗ್ರರ ಸ್ಕೆಚ್ ಬಿಡುಗಡೆ

06:01 PM May 06, 2024 IST | Bcsuddi
ವಾಯುಪಡೆಯ ವಾಹನದ ಮೇಲೆ ದಾಳಿ ನಡೆಸಿದ ಉಗ್ರರ ಸ್ಕೆಚ್ ಬಿಡುಗಡೆ
Advertisement

ನವದೆಹಲಿ: ಕಾಶ್ಮೀರದ ಪೂಂಚ್ ಸೆಕ್ಟರ್ ನಲ್ಲಿ ಭಾರತೀಯ ವಾಯುಸೇನೆಯ ವಾಹನದ ಮೇಲೆ ದಾಳಿ ಮಾಡಿ ಓರ್ವ ಯೋಧ ಹುತಾತ್ಮನಾದ ಘಟನೆ ಸಂಬಂಧಿಸಿದಂತೆ ದಾಳಿ ನಡೆಸಿದ ಇಬ್ಬರು ಪಾಕಿಸ್ತಾನೀ ಉಗ್ರಗಾಮಿಗಳ ಸ್ಕೆಚ್ ಅನ್ನು ಭದ್ರತಾ ಪಡೆಗಳು ಬಿಡುಗಡೆ ಮಾಡಿವೆ.

ಈ ಇಬ್ಬರು ಪಾಕಿಸ್ತಾನೀ ಉಗ್ರಗಾಮಿಗಳು ದಾಳಿಯ ರೂವಾರಿಗಳೆನ್ನಲಾಗಿದೆ. ಉಗ್ರರಿಗಾಗಿ ಘಟನೆ ನಡೆದ ಶಾಹಸಿತಾರ್ ಮೊದಲಾದ ಕಡೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಇಬ್ಬರ ಬಗ್ಗೆ ಸುಳಿವು ನೀಡಿದವರಿಗೆ 20 ಲಕ್ಷ ರೂ ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ.

ಮೇ 4 ರ ಸಂಜೆ ಪೂಂಚ್ ಜಿಲ್ಲೆಯ ಶಾಹಸಿತಾರ್ ಎಂಬಲ್ಲಿ ಹೋಗುತ್ತಿದ್ದ ವಾಯುಪಡೆ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ವಾಯುಪಡೆಯ ಕಾರ್ಪೊರಾಲ್ ಆಗಿದ್ದ ವಿಕ್ಕಿ ಪಹಾಡೆ ಹುತಾತ್ಮ ರಾಗಿದ್ದಾರೆ. ಹಾಗೂ ನಾಲ್ವರು ಯೋಧರು ಗಾಯಗೊಂಡಿದ್ದರು.

Advertisement

Author Image

Advertisement