For the best experience, open
https://m.bcsuddi.com
on your mobile browser.
Advertisement

ವಾಡಿಕೆಗಿಂತ ಆರು ದಿನಗಳ ಮೊದಲೇ ನೈರುತ್ಯ ಮುಂಗಾರು ಎಂಟ್ರಿ.!

05:26 PM Jul 02, 2024 IST | Bcsuddi
ವಾಡಿಕೆಗಿಂತ ಆರು ದಿನಗಳ ಮೊದಲೇ ನೈರುತ್ಯ ಮುಂಗಾರು ಎಂಟ್ರಿ
Advertisement

ನವದೆಹಲಿ: ವಾಡಿಕೆಗಿಂತ ಆರು ದಿನಗಳ ಮೊದಲೇ ನೈರುತ್ಯ ಮುಂಗಾರು ಇಡೀ ದೇಶವನ್ನು ವ್ಯಾಪಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ತಿಳಿಸಿದೆ.

Advertisement

ಮಂಗಳವಾರ ಕೊನೆಯದಾಗಿ ರಾಜಸ್ಥಾನ, ಹರಿಯಾಣ, ಪಂಜಾಬ್‌ ರಾಜ್ಯಗಳನ್ನು ಪ್ರವೇಶ ಮಾಡಿದೆ. ಈ ಮೂಲಕ ಜುಲೈ 2ರಂದು ಮುಂಗಾರು ಇಡೀ ದೇಶವನ್ನು ಆವರಿಸಿದಂತಾಗಿದೆ. ಸಾಮಾನ್ಯವಾಗಿ ಜುಲೈ 8ರಂದು ಮುಂಗಾರು ದೇಶವನ್ನು ವ್ಯಾಪಿಸುತ್ತಿತ್ತು ಎಂದು ಇಲಾಖೆ ಹೇಳಿದೆ.

ಮೇ 30ರಂದು ಮುಂಗಾರು ಕೇರಳವನ್ನು ಪ್ರವೇಶಿಸಿತ್ತು. ಮಹಾರಾಷ್ಟ್ರದವರೆಗೆ ತಲುಪಿದ ಬಳಿಕ ವೇಗ ಕಳೆದುಕೊಂಡಿತ್ತು. ಪರಿಣಾಮ ವಾಯವ್ಯ ಭಾರತದಲ್ಲಿ ತಾಪಮಾನ ಏರಿಕೆಯಾಗಿತ್ತು. ಕ್ರಮೇಣ ವೇಗ ಪಡೆದ ಮುಂಗಾರು ವಾಡಿಕೆಗಿಂತ ಆರು ದಿನಗಳ ಮೊದಲೇ ದೇಶವನ್ನು ವ್ಯಾಪಿಸಿದೆ.

ಜುಲೈನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದ್ದು, ಭಾರಿ ಮಳೆಯಿಂದಾಗಿ ಪಶ್ಚಿಮ ಹಿಮಾಲಯದ ರಾಜ್ಯಗಳ ಮತ್ತು ದೇಶದ ಮಧ್ಯ ಭಾಗಗಳಲ್ಲಿರುವ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿ ಪ್ರವಾಹಕ್ಕೆ ಕಾರಣವಾಗಬಹುದು ಎಂದು ಇಲಾಖೆ ಮುನ್ಸೂಚನೆ ನೀಡಿದೆ.

Tags :
Author Image

Advertisement