ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ವಯನಾಡು ಭೂಕುಸಿತ: 215 ಮೃತದೇಹ ಪತ್ತೆ, 206ಮಂದಿ ನಾಪತ್ತೆ

02:41 PM Aug 03, 2024 IST | BC Suddi
Advertisement

ತಿರುವನಂತಪುರಂ: ವಯನಾಡಿನ ಮುಂಡಕೈ ಮತ್ತು ಚೂರಲ್‌ಮಲ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಈವರೆಗೆ 215 ಮಂದಿಯ ಮೃತದೇಹ ಪತ್ತೆಯಾಗಿದ್ದು, 206 ಮಂದಿ ನಾಪತ್ತೆಯಾಗಿದ್ದಾರೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

Advertisement

ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತದಲ್ಲಿದೆ. ಪತ್ತೆಯಾದ ಮೃತದೇಹಗಳ ಪೈಕಿ 87 ಮಹಿಳೆಯರು ಮತ್ತು 98 ಪುರುಷರು ಇದ್ದು, 30 ಮಕ್ಕಳು ಸಾವನ್ನಪ್ಪಿದ್ದಾರೆ. 148 ಮೃತ ದೇಹಗಳನ್ನು ಹಸ್ತಾಂತರಿಸಲಾಗಿದೆ. ದುರಂತದಲ್ಲಿ 206 ಮಂದಿ ನಾಪತ್ತೆಯಾಗಿದ್ದಾರೆ. 81 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 206 ಜನರನ್ನು ಬಿಡುಗಡೆ ಮಾಡಿ ಶಿಬಿರಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ವಯನಾಡಿನಲ್ಲಿ 93 ಶಿಬಿರಗಳಲ್ಲಿ 10,042 ಜನರಿದ್ದಾರೆ. ಚೂರಲ್‌ಮಲದಲ್ಲಿ 10 ಶಿಬಿರಗಳಲ್ಲಿ 1707 ಜನರು ಆಶ್ರಯ ಪಡೆದಿದ್ದಾರೆ. ಚಾಲಿಯಾರ್ ನದಿಯಿಂದ ದೇಹದ ಭಾಗಗಳನ್ನು ಗುರುತಿಸುವುದು ತುಂಬಾ ಕಷ್ಟ. ಆದರೆ, ರಕ್ಷಣಾ ಕಾರ್ಯಕರ್ತರು ಭರವಸೆ ಕಳೆದುಕೊಳ್ಳದೆ ಜೀವ ಉಳಿಸಲು ಯತ್ನಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

 

Advertisement
Next Article