For the best experience, open
https://m.bcsuddi.com
on your mobile browser.
Advertisement

- ವಚನ : - ಶರಣ ಕಾಡಸಿದ್ಧೇಶ್ವರ

06:34 AM May 18, 2024 IST | Bcsuddi
  ವಚನ     ಶರಣ ಕಾಡಸಿದ್ಧೇಶ್ವರ
Advertisement

ಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ,  ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ

ವಚನ: :

Advertisement

ಕಲ್ಯಾಣಪುರದೊಳಗೆ ಬಿಜ್ಜಳಾಂಕನೆಂಬ ರಾಜನು

ಅಷ್ಟವಿಧಪ್ರಧಾನರ ಸಮೂಹದಲ್ಲಿ

ಶಿವಭಕ್ತಿ ಇಲ್ಲದೆ ರಾಜ್ಯವನಾಳುತಿರ್ಪನು.

ಇಂಗಳೇಶ್ವರನೆಂಬ ಪುರದ ವಿಪ್ರರ ಸಂದಣಿಯಲ್ಲಿ

ಬಸವೇಶ್ವರನುದ್ಭವಿಸಿ ಕಲ್ಯಾಣಕ್ಕೆ ಬಂದು

ಬಿಜ್ಜಳನ ಅಷ್ಟವಿಧಪ್ರಧಾನರ ನಷ್ಟವಮಾಡಿ,

ನವಮಪ್ರಧಾನನಾಗಿ, ಬಿಜ್ಜಳನ ರಾಜ್ಯವನ್ನಾಳುತ್ತ

ನಿತ್ಯದಲ್ಲಿ ಹಲವು ಜಂಗಮಕ್ಕೆ ಭೋಜನವ ಮಾಡುತ್ತ

ಬಸವಣ್ಣ ಇರ್ಪನು ಕಲ್ಯಾಣಪುರದಲ್ಲಿ ನೋಡೆಂದ

ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗನಿರ್ಮಾಯಪ್ರಭುವೆ.

-ಕಾಡಸಿದ್ಧೇಶ್ವರ

Tags :
Author Image

Advertisement