ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ವಚನ   -ಬಸವಲಿಂಗದೇವ

07:02 AM Aug 24, 2024 IST | BC Suddi
Advertisement

ಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ,  ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

Advertisement

https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಅಭಿಪ್ರಾಯ ಹಂಚಿಕೊಳ್ಳಿ.

ವಚನ:

ಅಯ್ಯಾ, ನಾನು ಬಹು ಸುಂದರನು, ನಾನು ಬಹು ಪರಾಕ್ರಮಿಯು,

ನಾನು ಬಹು ಭೋಗಿಯು, ನಾನು ಬಹು ಸುಖಿಯು,

ನಾನು ತರ್ಕ ವ್ಯಾಕರಣ ಅಮರ ಆಗಮ ಶಾಸ್ತ್ರ ಪುರಾಣದಲ್ಲಿ ಪ್ರೌಢನು.

ನನ್ನ ಸೋಲಿಸುವರಾರು?

ನಾನು ವೈದ್ಯಶಾಸ್ತ್ರದಲ್ಲಿ ಬಲ್ಲಿದನು, ನನಗೊಂದು ವ್ಯಾಧಿಯು ಮುಟ್ಟದು.

ನಾನು ರಣಾಗ್ರದಲ್ಲಿ ಬಲವಂತನು, ನನ್ನ ಮೇಲೆ ಬೀಳುವರಾರು ?

ನಾನು ಎಂದೆಂದಿಗೂ ಪುಣ್ಯವಂತನು, ನನಗೆ ದರಿದ್ರ ಬಂದು ಸೋಂಕದು

ನಾನು ಎಂದೆಂದಿಗೂ ಕ್ಷೀರಾಹಾರಿಯು, ಎನ್ನ ಭೋಗವ ತೊಲಗಿಸುವರಾರು ?

ನಾನು ಯಂತ್ರ ತಂತ್ರದಲ್ಲಿ ಬಲ್ಲಿದನು, ನನಗೆ ಒಂದು ಗ್ರಹ ಬಂದು ಸೋಂಕದು

ಎಂದು ಹಮ್ಮಿನಿಂದ ಭ್ರಮೆಗೊಂಡಿತಯ್ಯ ಎನ್ನ ಬುದ್ಧಿಯೆಂಬ ಕರಣವು.

ಇಂತಾ ದುಃಕರಣದ ಸಂಗದಿಂದ ಕಂದಿ ಕುಂದಿ ಕಂಗೆಟ್ಟೆನಯ್ಯ.

ಶ್ರೀಗುರುಲಿಂಗಜಂಗಮವೆ.

ಹರಹರ ಶಿವಶಿವ ಜಯಜಯ ಕರುಣಾಕರಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ.

 

-ಬಸವಲಿಂಗದೇವ

Tags :
ವಚನ - -ಬಸವಲಿಂಗದೇವ
Advertisement
Next Article