ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಲೋಕಸಭೆ ಚುನಾವಣೆಗೆ ಕಂಗನಾ ರಣಾವತ್ ಸ್ಪರ್ಧೆ..!!

09:49 AM Mar 25, 2024 IST | Bcsuddi
Advertisement

ದೆಹಲಿ : ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ಬಿಜೆಪಿ ಈ ಬಾರಿ ಲೋಕಸಭೆ ಟಿಕೆಟ್ ನೀಡಿದೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಕಂಗನಾ ರಣಾವತ್ ಸ್ಪರ್ಧೆ ಮಾಡಲಿದ್ದಾರೆ.

Advertisement

ಇಂದು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ 5ನೇ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಕಂಗನಾ ರಣಾವತ್​ ಅವರಿಗೆ ಈಗ ಬಿಜೆಪಿ ಟಿಕೆಟ್​ ನೀಡಿದೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಅವರು ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಅಧಿಕೃತವಾಗಿ ಕಂಗನಾ ರಣಾವತ್​ ಅವರು ರಾಜಕೀಯದ ಅಖಾಡಕ್ಕೆ ಇಳಿಯುತ್ತಿದ್ದಾರೆ.

‘ನಾನು ರಾಜಕೀಯಕ್ಕೆ ಎಂಟ್ರಿ ನೀಡುವುದಾದರೆ ಇದು ಸೂಕ್ತ ಸಮಯ’ ಎಂದು ಕಂಗನಾ ರಣಾವತ್​ ಅವರು ಇತ್ತೀಚೆಗೆ ಹೇಳಿದ್ದರು. ಆ ಮೂಲಕ ಅವರು ಸೂಚನೆ ನೀಡಿದ್ದರು. ಜನರ ಊಹೆ ಈಗ ನಿಜವಾಗಿದೆ. ಮೂಲತಃ ಹಿಮಾಚಲ ಪ್ರದೇಶದವರಾದ ಕಂಗನಾಗೆ ಮಂಡಿ ಕ್ಷೇತ್ರದ ಟಿಕೆಟ್​ ಸಿಕ್ಕಿದೆ.

Advertisement
Next Article