For the best experience, open
https://m.bcsuddi.com
on your mobile browser.
Advertisement

ಲೋಕಸಭಾ ಚುನಾವಣೆ 2024 - ರಾಜ್ಯದಲ್ಲಿ 1 ಗಂಟೆವರೆಗೂ 38.23% ರಷ್ಟು ಮತದಾನ!

02:18 PM Apr 26, 2024 IST | Bcsuddi
ಲೋಕಸಭಾ ಚುನಾವಣೆ 2024   ರಾಜ್ಯದಲ್ಲಿ 1 ಗಂಟೆವರೆಗೂ 38 23  ರಷ್ಟು ಮತದಾನ
Advertisement

ಬೆಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 14 ಕ್ಷೇತ್ರಗಳಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ.38.23ರಷ್ಟು ಮತದಾನವಾಗಿದೆ.

ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಶೇಕಡಾವಾರು 30.10ರಷ್ಟು ಮತದಾನವಾಗಿದೆ. ಬೆಂಗಳುರು ಉತ್ತರ ಕ್ಷೇತ್ರದಲ್ಲಿ ಶೇ.32.25ರಷ್ಟು ಮತದಾನವಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಶೇ.36.9 ಹಾಗೂ ಬೆಂಗಳೂರು ದಕ್ಷಿಣದಲ್ಲಿ ಶೇ.31.51ರಷ್ಟು ಮತದಾನವಾಗಿದೆ. ಚಾಮರಾಜನಗರ ಕ್ಷೇತ್ರದಲ್ಲಿ ಶೇ.39.57, ಚಿತ್ರದುರ್ಗದಲ್ಲಿ ಶೇ.39.5, ಹಾಸನ ಶೇ.40.99, ಮಂಡ್ಯ ಶೇ.40.70, ಉಡುಪಿ-ಚಿಕ್ಕಮಗಳೂರಿನಲ್ಲಿ ಶೇ.46.43ರಷ್ಟು ಮತದಾನವಾಗಿದೆ. ಚಿಕ್ಕಬಳ್ಳಾಪುರದಲ್ಲಿ ಶೇ.39.85, ದಕ್ಷಿಣ ಕನ್ನಡದಲ್ಲಿ 48.10, ಮೈಸೂರು-ಕೊಡಗು ಶೇ.48.50 ಹಾಗೂ ಕೋಲಾರ ಶೇ.38.42ರಷ್ಟು ಮತದಾನವಾಗಿದೆ.

Advertisement
Author Image

Advertisement