For the best experience, open
https://m.bcsuddi.com
on your mobile browser.
Advertisement

ಲೋಕಸಭಾ ಚುನಾವಣೆ ಬಳಿಕ ಮೊಬೈಲ್ ರೀಚಾರ್ಜ್ ಬೆಲೆ ಶೇ.25 ದುಬಾರಿ

11:42 AM May 15, 2024 IST | Bcsuddi
ಲೋಕಸಭಾ ಚುನಾವಣೆ ಬಳಿಕ ಮೊಬೈಲ್ ರೀಚಾರ್ಜ್ ಬೆಲೆ ಶೇ 25 ದುಬಾರಿ
Advertisement

ನವದೆಹಲಿ: ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಮೊಬೈಲ್ ಬಳಕೆದಾರರಿಗೆ ಬಿಗ್ ಶಾಕ್ ಎದುರಾಗುವ ಸಾಧ್ಯತೆ ಇದೆ. ಸದ್ಯದಲ್ಲೇ ಮೊಬೈಲ್ ಟೆಲಿಕಾಂ ಕಂಪನಿಗಳು ಶುಲ್ಕವನ್ನು ಶೇ.25ರಷ್ಟು ಹೆಚ್ಚಿಸಲು ಯೋಜಿಸುತ್ತಿವೆ ಎಂದು ವರದಿಯಾಗಿದೆ.

ದೂರಸಂಪರ್ಕ ಕಂಪನಿಗಳು ಗ್ರಾಹಕರಿಗೆ 5ಜಿ ಸೇವೆಯನ್ನು ಒದಗಿಸಲು ಅಪಾರ ಹಣ ವಿನಿಯೋಗ ಮಾಡಿದೆ. ಹೀಗಾಗಿ ಇದರ ಲಾಭವನ್ನು ಪಡೆಯುವ ಸಲುವಾಗಿ ಮೊಬೈಲ್ ಸೇವೆಯ ಶುಲ್ಕವನ್ನು ಹೆಚ್ಚಿಸಲಾಗುತ್ತಿದೆ. ಇನ್ನು ಇದರೊಂದಿಗೆ ಹಂತ ಹಂತವಾಗಿ ಕಡಿಮೆ ಮೌಲ್ಯದ ಪ್ಯಾಕ್ ಗಳನ್ನು ರದ್ದು ಮಾಡಲಾಗುತ್ತದೆ ಎನ್ನಲಾಗಿದೆ.

ನಗರ ಪ್ರದೇಶಗಳಲ್ಲಿ ವಾಸಿಸುವ ಗ್ರಾಹಕರ ವೆಚ್ಚವು 3.2 ಪ್ರತಿಶತದಿಂದ 3.5 ಪ್ರತಿಶತಕ್ಕೆ ಹೆಚ್ಚಾಗುತ್ತದೆ. ಇದೇ ವೇಳೆಯಲ್ಲಿ, ಹಳ್ಳಿಗಳಲ್ಲಿ ವಾಸಿಸುವ ಗ್ರಾಹಕರ ಟೆಲಿಕಾಂ ಮೇಲಿನ ವೆಚ್ಚವು 5.2 ಪ್ರತಿಶತದಿಂದ 5.9 ಪ್ರತಿಶತಕ್ಕೆ ಹೆಚ್ಚಾಗುವ ಸಾಧ್ಯತೆ ಇದೆ.

Advertisement

Author Image

Advertisement