For the best experience, open
https://m.bcsuddi.com
on your mobile browser.
Advertisement

'ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ವಿಸರ್ಜನೆ ಆಗುತ್ತೆ'- ಶಾಸಕ ಸಿ.ಸಿ.ಪಾಟೀಲು

05:12 PM Apr 16, 2024 IST | Bcsuddi
 ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ವಿಸರ್ಜನೆ ಆಗುತ್ತೆ   ಶಾಸಕ ಸಿ ಸಿ ಪಾಟೀಲು
Advertisement

ಗದಗ : ಭಾಗ್ಯಗಳನ್ನು ಕೊಟ್ಟು ರಾಜ್ಯವನ್ನು ದುಸ್ಥಿತಿಗೆ ತಂದರು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಚಿವ ಹಾಗೂ ಶಾಸಕ ಸಿ.ಸಿ.ಪಾಟೀಲು ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಮಿದುಳು ರೈಲ್ವೆ ಹಳಿ ಇದ್ದಂತೆ. ರೈಲು ಹಳಿ ಪ್ಯಾರಲಲ್‌ನಂತೆ ಕಾಂಗ್ರೆಸ್ ಎಐಸಿಸಿ ವರಿಷ್ಠರು ರೈಲು ಹಳಿ ಇದ್ದಂತೆ. ರಾಷ್ಟ್ರವ್ಯಾಪಿ ನಿಲ್ಲಿಸುತ್ತಿರುವುದು ಕೇವಲ 230 ಸ್ಥಾನಕ್ಕೆ. ಅಧಿಕಾರಕ್ಕೆ ಬರಲು 272 ಸ್ಥಾನ ಬೇಕು. ಯಾವ ಪುರುಷಾರ್ಥ, ಯಾವ ಲಾಜಿಕ್ ಮೇಲೆ ಗ್ಯಾರಂಟಿ ಕೊಡ್ತಿದ್ದಾರೆ? ಎಂದು ಪ್ರಶ್ನಿಸಿದರು.

ಅಕಸ್ಮಾತ್ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದ್ರೆ ಸೂರ್ಯ ಪಶ್ಚಿಮಕ್ಕೆ ಹುಟ್ಟಿದಂತೆ. ಅವರ ಮಿತ್ರ ಪಕ್ಷವೇ ಇವರನ್ನು ಪರಿಗಣಿಸಿಲ್ಲ. ಪೊಳ್ಳು ಭರವಸೆಯನ್ನು ಯಾರೂ ನಂಬುವುದಿಲ್ಲ. ಭಾಗ್ಯಗಳನ್ನು ಕೊಟ್ಟು ಕರ್ನಾಟಕವನ್ನು ದುಸ್ಥಿತಿಗೆ ತಂದಿದ್ದಾರೆ ಎಂದು ಕಿಡಿಕಾರಿದರು.ಚುನಾವಣೆಯಲ್ಲಿ ಗೆದ್ದರೆ ಮಾತು ಉಳಿಸಿಕೊಳ್ಳಬೇಕು. ಇವರು ಅಧಿಕಾರಕ್ಕೆ ಬರುವುದಿಲ್ಲ, ಬೇಕಾದ್ದು ಮಾತನಾಡ್ತಾರೆ. ಕಾಂಗ್ರೆಸ್‌ನವರು ವಿಚಿತ್ರ ಸನ್ನಿವೇಶದಲ್ಲಿ ಹೊರಟಿದ್ದಾರೆ. ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ವಿಸರ್ಜನೆ ಆಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.

Advertisement

ಸಿಎಂ ಹಾಗೂ ಡಿಸಿಎಂ ಎಷ್ಟು ಕ್ಷೇತ್ರದಲ್ಲಿ ಓಡಾಡಿದ್ದಾರೆ? ಒಬ್ಬರು ಮೈಸೂರು ಹಿಡಿದುಕೊಂಡು ಕೂತಿದ್ದಾರೆ. ಇನ್ನೊಬ್ಬರು ಬೆಂಗಳೂರು ಗ್ರಾಮಾಂತರ ಹಿಡಿದುಕೊಂಡು ಕೂತಿದ್ದಾರೆ ಎಂದರು

Author Image

Advertisement