ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯ

09:30 AM Apr 20, 2024 IST | Bcsuddi
Advertisement

ನವದೆಹಲಿ: 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102 ಕ್ಷೇತ್ರಗಳಿಗೆ ನಡೆದಿದ್ದ ಇಂದು ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಅಂತ್ಯವಾಗಿದೆ.

Advertisement

102 ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳಿಂದ ಒಟ್ಟು 1625 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 9 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಈಶಾನ್ಯದ ಆರು ರಾಜ್ಯಗಳು, ತಮಿಳುನಾಡಿನ ಎಲ್ಲಾ 39 ಕ್ಷೇತ್ರಗಳು, ಲಕ್ಷದ್ವೀಪದ 1 ಕ್ಷೇತ್ರ, ಅರುಣಾಚಲ ಪ್ರದೇಶದ 2, ಬಿಹಾರದ 4, ಅಸ್ಸಾಂನ 4, ಛತ್ತೀಸ್ ಗಢದ 1, ಮಧ್ಯಪ್ರದೇಶದ 6, ಮಹಾರಾಷ್ಟ್ರದ 5, ಮಣಿಪುರದ 2, ಮೇಘಾಲಯದ 2, ಮಿಜೋರಾಂದ 1, ನಾಗಾಲ್ಯಾಂಡ್‌ನ 1, ರಾಜಸ್ಥಾನದ 12, ಸಿಕ್ಕಿಂನ 1, ತ್ರಿಪುರಾದ 1, ಉತ್ತರ ಪ್ರದೇಶದ 8, ಉತ್ತರಾಖಂಡದ 5, ಪಶ್ಚಿಮ ಬಂಗಾಳದ 3, ತಮಿಳುನಾಡಿನ 39, ಅಂಡಮಾನ್ ಮತ್ತು ನಿಕೋಬಾರ್ ನ 1, ಜಮ್ಮು ಮತ್ತು ಕಾಶ್ಮೀರದ 1, ಲಕ್ಷದ್ವೀಪದ 1 ಮತ್ತು ಪುದುಚೇರಿಯ 1 ಲೋಕಸಭಾ ಕ್ಷೇತ್ರದಲ್ಲಿ ನಡೆದ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ.

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಯಶಸ್ವಿಯಾಗಿ ಅಂತ್ಯವಾಗಿದೆ. ಮೊದಲ ಬಾರಿ ಮತದಾನ ಮಾಡುವ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. ಮೊದಲ ಹಂತದಲ್ಲಿ ಯಾವ ರಾಜ್ಯದಲ್ಲಿ ಎಷ್ಟು ಶೇಕಡಾ ಮತದಾನವಾಗಿದೆ ಎನ್ನುವುದು ಇನ್ನೂ ಚುನಾವಣಾ ಆಯೋಗ ಅಧಿಕೃತವಾಗಿ ಮಾಹಿತಿ ಬಂಹಿರಂಗ ಪಡಿಸಿಲ್ಲ. ಇನ್ನು ನಾಗಾಲ್ಯಾಂಡ್ ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ ನಡೆದಿದೆ. 20 ಶಾಸಕು ಒಳಗೊಂಡಂತೆ 4 ಲಕ್ಷ ಮತದಾರರು ಮತಗಟ್ಟೆಗೆ ಬಂದಿಲ್ಲ ಎಂದು ವರದಿಯಾಗಿದೆ.

Advertisement
Next Article