ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಲಾರಿ - ಟಾಟಾ ಏಸ್​ ನಡುವೆ ಭೀಕರ ಅಪಘಾತ-ನಾಲ್ವರು ಸಾವು

01:54 PM Dec 07, 2023 IST | Bcsuddi
Advertisement

ರಾಯಚೂರು: ಲಾರಿ ಹಾಗೂ ಟಾಟಾ ಏಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ನಾಲ್ವರು ಸಾವನ್ನಪ್ಪಿರುವ ಘಟನೆ ಸಿಂಧನೂರು ತಾಲೂಕು ಪಗಡದಿನ್ನಿ ಕ್ಯಾಂಪ್ ಬಳಿ ನಡೆದಿದೆ.

Advertisement

ಇಸ್ಮಾಯಿಲ್(25), ಚನ್ನಬಸವ(26), ಅಂಬರೀಶ್(20), ರವಿ(21) ಮೃತ ದುರ್ವೈವಿಗಳು. ಮಸ್ಕಿಯಿಂದ ಸಿಂಧನೂರು ಕಡೆ ಬರುವಾಗ ಅಪಘಾತ ಸಂಭವಿಸಿದ್ದು. ಮೃತ ದುರ್ದೈವಿಗಳು ಮದುವೆ ಡೆಕೊರೇಟರ್ ಕೆಲಸ‌ ಮಾಡುತ್ತಿದ್ದರು ಎನ್ನಲಾಗುತ್ತಿದೆ.

ಘಟನೆಯಲ್ಲಿ ಸಮೀರ್ ಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಸಿಂಧನೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನ ಸಿಂಧನೂರು ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಈ ಬಗ್ಗೆ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Next Article