For the best experience, open
https://m.bcsuddi.com
on your mobile browser.
Advertisement

ಲವ್​ ಜಿಹಾದ್​ ಸಹಾಯವಾಣಿಗೆ 17 ಬೆದರಿಕೆ ಕರೆಗಳು..!

06:33 PM Jun 02, 2024 IST | Bcsuddi
ಲವ್​ ಜಿಹಾದ್​ ಸಹಾಯವಾಣಿಗೆ 17 ಬೆದರಿಕೆ ಕರೆಗಳು
Advertisement

ರಾಜ್ಯದಲ್ಲಿ ಲವ್​ ಜಿಹಾದ್​ಗೆ ಸಿಲುಕಿದ ಹಿಂದೂ ಯುವತಿಯರು ಹಾಗೂ ಮಹಿಳೆಯರ ರಕ್ಷಣೆಗಾಗಿ ಶ್ರೀರಾಮಸೇನೆ ಸಹಾಯವಾಣಿ ಕೇಂದ್ರ ಆರಂಭಿಸಿದೆ. ಆದರೆ, ಈ ಸಹಾಯವಾಣಿ ಕೇಂದ್ರಕ್ಕೆ ಬೆದರಿಕೆ ಕರೆಗಳು ಬಂದಿವೆ. ನಾಲ್ಕು ದಿನದಲ್ಲಿ 17 ಬೆದರಿಕೆ ಕರೆಗಳು ಬಂದಿವೆ ಎಂದು ಶ್ರೀರಾಮಸೇನೆ ಮುಖಂಡ ಗಂಗಾಧರ ಕುಲಕರ್ಣಿ ತಿಳಿಸಿದ್ದಾರೆ. ಲವ್ ಜಿಹಾದ್‌ನಲ್ಲಿ ಸಿಲುಕಿದ ಹಿಂದೂ ಯುವತಿಯರ ರಕ್ಷಣೆಗೆ ಮೇ 29 ರಂದು ಶ್ರೀರಾಮಸೇನೆ ಸಹಾಯವಾಣಿ ಆರಂಭಸಿತ್ತು. ನಾಲ್ಕು ದಿನಗಳಲ್ಲಿ 400ಕ್ಕೂ ಅಧಿಕ ಕರೆಗಳು ಬಂದಿವೆ. 37 ಜನ ತಾಯಂದಿರು, 42 ಪ್ರೋತ್ಸಾಹಕ ಕತೆಗಳು, 52 ಜನ ಲವ್ ಜಿಹಾದ್​ನಲ್ಲಿ ಸಿಲುಕಿರುವ ಸಂತ್ರಸ್ತೆಯರು ಕರೆ ಮಾಡಿದ್ದಾರೆ. ಅಲ್ಲದೆ ನಮ್ಮ ಕಾರ್ಯಕ್ಕೆ ಅಭಿನಂದಿಸಿ ಮಹಿಳೆಯರು, ವಕೀಲರು ಮತ್ತು ಕೆಲ ಮಾಧ್ಯಮದವರೂ ಕರೆ ಮಾಡಿ ಒಳ್ಳೆ ಕಾರ್ಯ ಮಾಡುತ್ತಿದ್ದೀರಿ ಎಂದು ಹಾರೈಸುತ್ತಿದ್ದಾರೆ. ಆದರೆ ಈ ಮಧ್ಯೆ 17 ಬೆದರಿಕೆ ಕರೆಗಳು ಕೂಡ ಬಂದಿವೆ ಎಂದು ತಿಳಿಸಿದರು. ಅಲ್ಲದೆ, ಸಹಾಯವಾಣಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದನ್ನೂ ಕೂಡ ರಿಪೋರ್ಟ್​ ಮಾಡಿ ಬ್ಲಾಕ್​ ಮಾಡಿಸಿದ್ದಾರೆ. ಹೀಗೆ ಎಲ್ಲ ರೀತಿಯಿಂದಲೂ ನಮಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.ಇದರಿಂದ ನಮಗೆ ಸ್ಪಷ್ಟವಾಗುತ್ತಿದೆ, ನಮ್ಮ ಸಹಾಯವಾಣಿ ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿದೆ. ನಮ್ಮ ಸಹಾಯವಾಣಿಯಿಂದ ವಿರೋಧಗಳಿಗೆ ಎಚ್ಚರಿಕೆ ಮುಟ್ಟಿದೆ. ಇದರ ನಡುವೆಯೂ ನಮಗೆ ವ್ಯಾಪಕವಾದ ಸ್ಪಂದನೆ ಸಿಗುತ್ತಿದೆ ಎಂದರು. ಬಾಗಲಕೋಟೆ ಮತ್ತು ಹುಬ್ಬಳ್ಳಿ ಜಿಲ್ಲಾ ಕೇಂದ್ರಗಳಲ್ಲಿ ಮೇ 29 ರಂದು ಶ್ರೀರಾಮ ಸೇನೆಯ ಜಿಲ್ಲಾ ಘಟಕದ ವತಿಯಿಂದ ಹಿಂದೂ ಹೆಣ್ಣುಮಕ್ಕಳ ರಕ್ಷಣೆಗಾಗಿ ಸಹಾಯವಾಣಿಯನ್ನು ಆರಂಭಿಸಲಾಯಿತು. ಈ ಸಹಾಯವಾಣಿಯು 9090443444 ದಿನದ 24X7 ಕಾರ್ಯ ನಿರ್ವಹಿಸಲಿದೆ.

Author Image

Advertisement