For the best experience, open
https://m.bcsuddi.com
on your mobile browser.
Advertisement

ಲಂಡನ್ ಗೆ ಹಾರಿದ ರಾಕಿಂಗ್ ಸ್ಟಾರ್ ಯಶ್‌ ಜೋಡಿ

12:34 PM Dec 19, 2023 IST | Bcsuddi
ಲಂಡನ್ ಗೆ ಹಾರಿದ ರಾಕಿಂಗ್ ಸ್ಟಾರ್ ಯಶ್‌ ಜೋಡಿ
Advertisement

ಬೆಂಗಳೂರು: ಟಾಕ್ಸಿಕ್ ಸಿನಿಮಾದ ಅಪ್ ಡೇಟ್ ಕೊಟ್ಟ ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್ ಜೊತೆಗೆ ಲಂಡನ್ ಗೆ ಹಾರಿದ್ದಾರೆ.ಅಲ್ಲಿ ಕ್ರಿಸ್ ಮಸ ಗಾಗಿ ಸಿಂಗಾರಗೊಂಡಿರುವ ಲಂಡನ್‌ ಬೀದಿಯಲ್ಲಿ ನಿಂತು ಭರ್ಜರಿಯಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಈ ಫೋಟೋವನ್ನು ಖುದ್ದು ರಾಧಿಕ ಅವರೇ ತಮ್ಮ ಇನ್ಸ್ಟಾ ಗ್ರಾಮ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ.ಇತ್ತ ಟಾಕ್ಸಿಕ್ ಸಿನಿಮಾದ ಬಗ್ಗೆ ಅನೇಕ ಕಡೆ ಚರ್ಚೆಯಾಗುತ್ತಿದೆ. ಅನೇಕರು ಟೈಟಲ್ ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಒಂದು ನಿಮಿಷ ಹದಿನೆಂಟು ಸೆಕೆಂಡ್ ನ ‘ಟಾಕ್ಸಿಕ್’ ವಿಡಿಯೋ ಎಲ್ಲೆಡಡೇ ಭಾರೀ ಸದ್ದು ಮಾಡ್ತಿದೆ. ಹೊಸದೊಂದು ಅನುಭವ ಕೊಡ್ತಿದೆ. ಅಷ್ಟೋಂದು ವಿಷಗಳನ್ನ ಈ ಪುಟ್ಟ ವಿಡಿಯೋದಲ್ಲಿ ಅಡಗಿಸಲಾಗಿದೆ.

Advertisement

ಡಿಸೆಂಬರ್ 8ರಂದು ರಿಲೀಸ್ ಆದ ‘ಟಾಕ್ಸಿಕ್’ ಟೈಟಲ್ ಟೀಸರ್ ಗಂಟೆಗಳಲ್ಲಿ ಲಕ್ಷ ಲಕ್ಷ ವ್ಯೂವ್ಸ್ ನ್ನು ಪಡೆದು ಕೊಂಡಿದ್ದು ಈ ಚಿತ್ರ ಅಭಿಮಾನಿ ವಲಯಗಳಲ್ಲಿ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ.

Author Image

Advertisement