For the best experience, open
https://m.bcsuddi.com
on your mobile browser.
Advertisement

ರೈತರ ಪ್ರತಿಭಟನೆ ಬಾಂಗ್ಲಾ ಮಾದರಿಯ ಹಿಂಸಾಚಾರ ಸೃಷ್ಟಿಸುತ್ತಿತ್ತು - ಕಂಗನಾ ಹೇಳಿಕೆಗೆ ಛೀಮಾರಿ ಹಾಕಿದ ಬಿಜೆಪಿ

10:22 AM Aug 27, 2024 IST | BC Suddi
ರೈತರ ಪ್ರತಿಭಟನೆ ಬಾಂಗ್ಲಾ ಮಾದರಿಯ ಹಿಂಸಾಚಾರ ಸೃಷ್ಟಿಸುತ್ತಿತ್ತು   ಕಂಗನಾ ಹೇಳಿಕೆಗೆ ಛೀಮಾರಿ ಹಾಕಿದ ಬಿಜೆಪಿ
Advertisement

ನವದೆಹಲಿ: 'ರೈತರು ತಿಂಗಳಾನುಗಟ್ಟಲೆ ನಡೆಸಿದ ಪ್ರತಿಭಟನೆಯಲ್ಲಿ ಹೆಣಗಳು ನೇತಾಡುತ್ತಿದ್ದವು. ಅತ್ಯಾಚಾರಗಳು ನಡೆದಿವೆ. ಬಾಂಗ್ಲಾದೇಶ ಮಾದರಿಯ ಅರಾಜಕತೆ ಸೃಷ್ಟಿಗೆ ಇಲ್ಲಿ ಯೋಜನೆ ನಡೆದಿತ್ತು' ಎಂಬ ಸಂಸದೆ ಕಂಗನಾ ರನೌತ್ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ಛೀಮಾರಿ ಹಾಕಿದೆ. 'ಅದು ಪಕ್ಷದ ಅಭಿಪ್ರಾಯವಲ್ಲ, ಕಂಗನಾ ಅವರ ವೈಯಕ್ತಿಕ ಹೇಳಿಕೆಯಾಗಿದೆ. ಪಕ್ಷದ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅಧಿಕಾರ ಅವರಿಗಿಲ್ಲ ಹಾಗೂ ನಾವು ಯಾವುದೇ ರೀತಿಯ ಅನುಮತಿಯೂ ನೀಡಿಲ್ಲ' ಎಂದು ಬಿಜೆಪಿ ತನ್ನ ಸಂಸದೆ ಕಂಗನಾ ಹೇಳಿಕೆಗೆ ಸ್ಪಷ್ಟನೆ‌ ನೀಡಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಈ ರೀತಿಯ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ನೀಡಿದೆ. ಇನ್ನು ಕಾಂಗ್ರೆಸ್ ಹಿರಿಯ ನಾಯಕ ರಣದೀಪ್ ಸುರ್ಜೇವಾಲಾ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. 'ಇವೆಲ್ಲಾ ಕಂಗನಾ ಅವರ ವೈಯಕ್ತಿಕ ಮಾತುಗಳಾ? ಅಥವಾ ಬೇರೆ ಯಾರಾದರೂ ಮಾತನಾಡುವಂತೆ ಹೇಳಿದ್ದಾರಾ? ಹಾಗಾದರೆ ಈ ವಿಷಯದಲ್ಲಿ ಬಿಜೆಪಿ ಯಾಕೆ ಮೌನವಾಗಿದೆ ಎಂದು ಸುರ್ಜೇವಾಲಾ ಪ್ರಶ್ನಿಸಿದ್ದಾರೆ. ‌ 'ಸೇನೆ ಹಾಗೂ ಪೊಲೀಸರು ಇಲ್ಲದಿದ್ದರೆ ಬಾಂಗ್ಲಾದೇಶದಲ್ಲಿ ನಡೆಯಿತಲ್ಲಾ ಅದು ಇಲ್ಲಿ ಸಂಭವಿಸಲು ಹೆಚ್ಚು ಸಮಯ ಬೇಕಿರಲಿಲ್ಲ. ರೈತರ ಮಸೂದೆ ವಾಪಾಸ್ ಪಡೆದ ನಂತರವೂ ಅವರು ಅಲ್ಲಿ ಕುಳಿತಿದ್ದರು. ಅವರಿಗೆ ಮಸೂದೆ ಹಿಂಪಡೆಯುತ್ತಾರೆ ಎಂಬ ಕಲ್ಪನೆಯೇ ಇರಲಿಲ್ಲ' ಎಂದಿದ್ದಾರೆ. 'ಚೀನಾ, ಅಮೆರಿಕದಂತ ವಿದೇಶಿ ಶಕ್ತಿಗಳು ಇಂಥ ಹೋರಾಟಗಳ ಹಿಂದೆ ಕೆಲಸ ಮಾಡುತ್ತಿವೆ. ಆದರೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾದರೂ, ಸಿನಿಮಾದವರ ಅಂಗಡಿ ನಡೆಯುತ್ತಲೇ ಇರಬೇಕು ಎಂಬ ಧೋರಣೆ ಇವರದ್ದು. ಆದರೆ ದೇಶವೇ ಹಾಳಾದರೆ, ಇವರೂ ಹಾಳಾಗುತ್ತಾರೆ ಎಂಬ ಸತ್ಯವನ್ನು ಇವರಿಗೆ ನಿತ್ಯ ಮನವರಿಕೆ ಮಾಡಿಕೊಡಬೇಕಿದೆ' ಎಂದು ಕಂಗನಾ ಹೇಳಿದ್ದಾರೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Advertisement
Author Image

Advertisement