For the best experience, open
https://m.bcsuddi.com
on your mobile browser.
Advertisement

ರೈತರು ವಿವಿಧ ಸೌಲಭ್ಯ ಪಡೆಯಬೇಕಾದರೆ ಈ ಕೆಲಸ ಕಡ್ಡಾಯವಾಗಿ ಮಾಡಬೇಕು.!

07:57 AM Jun 15, 2024 IST | Bcsuddi
ರೈತರು ವಿವಿಧ ಸೌಲಭ್ಯ ಪಡೆಯಬೇಕಾದರೆ ಈ ಕೆಲಸ ಕಡ್ಡಾಯವಾಗಿ ಮಾಡಬೇಕು
Advertisement

ಬೆಂಗಳೂರು : ರೈತರ ಬೇಡಿಕೆಗೆ ಅನುಗುಣವಾಗಿ ಬೀಜ, ರಸಗೊಬ್ಬರ ವಿತರಿಸಬೇಕು. ಸರಕಾರದಿಂದ ಕೃಷಿ ಸಂಬಂಧಿತ ಎಲ್ಲ ಸೌಲಭ್ಯಗಳನ್ನು ಪಡೆಯಲು ಪ್ರತಿ ರೈತ ಪ್ರೂಟ್ ಐಡಿ ಹೊಂದುವುದು ಕಡ್ಡಾಯವಾಗಿದ್ದು, ರೈತರಲ್ಲಿ ಜಾಗೃತಿ ಮೂಡಿಸಲು ಮತ್ತು ಪ್ರೂಟ್ ಐಡಿ ಹೊಂದಲು ಅಭಿಯಾನ ಹಮ್ಮಿಕೊಳ್ಳಬೇಕೆಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಮುಂಗಾರು ಪೂರ್ವಕಾಲದಲ್ಲಿ ಮಳೆ ಚನ್ನಾಗಿ ಆಗಿದ್ದರಿಂದ ನಮ್ಮ ಜಿಲ್ಲೆಯ ರೈತರು ಮುಂಗಾರು ಆರಂಭಕ್ಕೂ ಮೊದಲೇ ಬಿತ್ತನೆ ಆರಂಭಿಸಿದ್ದಾರೆ. ಈಗ ಸುಮಾರು ಶೇ. 36 ರಷ್ಟು ಕೃಷಿ ಭೂಮಿ ಬಿತ್ತನೆ ಆಗಿದೆ. ಉಳಿದ ರೈತರು ಬಿತ್ತನೆ ಮಾಡುತ್ತಿದ್ದಾರೆ. ಎಲ್ಲ ರೈತರಿಗೆ ಅವರ ಬೇಡಿಕೆಗೆ ಅನುಗುಣವಾಗಿ ಬೀಜ, ರಸಗೊಬ್ಬರಗಳನ್ನು ಪೂರೈಸಲು ಕೃಷಿ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕೆಂದು ಸೂಚನೆ ನೀಡಲಾಗಿದೆ.

ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಪ್ರತಿ ರೈತ ಪ್ರೂಟ್ ಐಡಿ ಹೊಂದುವುದು ಅಗತ್ಯವಾಗಿದೆ. ಈಗಾಗಲೇ ಶೇ. 76 ರಷ್ಟು ರೈತರು ಪ್ರೂಟ್ ಐಡಿ ಹೊಂದಿದ್ದಾರೆ. ಉಳಿದ ರೈತರು ಪ್ರೂಟ್ ಐಡಿ ಹೊಂದುವಂತೆ ಜಾಗೃತಿ ಮೂಡಿಸಿ, ಪ್ರಗತಿ ಸಾಧಿಸಲು ರೈತರ ಜಾಗೃತಿಗಾಗಿ ಅಭಿಯಾನ ಹಮ್ಮಿಕೊಳ್ಳುವಂತೆ ತಿಳಿಸಲಾಗಿದೆ.

Advertisement

Tags :
Author Image

Advertisement