For the best experience, open
https://m.bcsuddi.com
on your mobile browser.
Advertisement

ರೈತರು ಗಮನಿಸ ಬೇಕಾದ ಸುದ್ದಿ.! ಫಸಲ್ ವಿಮಾ ಯೋಜನೆ: ಹಿಂಗಾರು ಹಂಗಾಮು ವಿಮೆ ನೊಂದಣಿ

07:51 AM Nov 04, 2023 IST | Bcsuddi
ರೈತರು ಗಮನಿಸ ಬೇಕಾದ ಸುದ್ದಿ   ಫಸಲ್ ವಿಮಾ ಯೋಜನೆ  ಹಿಂಗಾರು ಹಂಗಾಮು ವಿಮೆ ನೊಂದಣಿ
Advertisement

ಚಿತ್ರದುರ್ಗ: 2023-24ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಈರುಳ್ಳಿ (ನೀರಾವರಿ) ಬೆಳೆಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ವಿಮೆ ನೊಂದಣಿಗೆ ಡಿಸೆಂಬರ್ 1 ಕೊನೆಯ ದಿನವಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಕಸಬಾ ಹಾಗೂ ತುರುವನೂರು ಹೋಬಳಿ, ಚಳ್ಳಕೆರೆ ತಾಲ್ಲೂಕಿನ ಕಸಬಾ ಹಾಗೂ ತಳಕು ಹೋಬಳಿ, ಹಿರಿಯೂರು ತಾಲ್ಲೂಕಿನ ಐಮಂಗಲ ಹಾಗೂ ಜೆ.ಜಿ.ಹಳ್ಳಿ ಹೋಬಳಿಗಳಲ್ಲಿ ಈರುಳ್ಳಿ (ನೀರಾವರಿ) ಬೆಳೆಯನ್ನು ಅಧಿಸೂಚಿಸಲಾಗಿದೆ.

Advertisement

2023ರ ಹಿಂಗಾರು ಹಂಗಾಮಿನಲ್ಲಿ ಈರುಳ್ಳಿ ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರ್ ವಿಮಾ ಮೊತ್ತ ರೂ.80500/- ಮತ್ತು ರೈತರ ವಿಮಾ ಕಂತು ರೂ.4025/- ಆಗಿರುತ್ತದೆ.

ಅಧಿಸೂಚಿತ ಬೆಳೆಗಳ ವಿಮೆಯನ್ನು ಬ್ಯಾಂಕ್‍ಗಳಲ್ಲಿ, ಸಾಮಾನ್ಯ ಸೇವಾ ಕೇಂದ್ರ, ಆರ್ಥಿಕ ಸಂಸ್ಥೆಗಳಲ್ಲಿ ನೊಂದಣಿ ಮಾಡಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಸಮೀಪದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ರೈತ ಸಂಪರ್ಕ  ಕೇಂದ್ರ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ಹತ್ತಿರದ ಬ್ಯಾಂಕುಗಳ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತೊಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author Image

Advertisement