ರೈತರಿಗೆ ಮುಖ್ಯ ಮಾಹಿತಿ.! ರೈತರ ಬೆಳೆ ಪರಿಹಾರ ಬಿಡುಗಡೆ, ಸಹಾಯಕ್ಕೆ ಸಹಾಯವಾಣಿ
07:25 AM May 15, 2024 IST | Bcsuddi
Advertisement
ದಾವಣಗೆರೆ: 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಬೆಳೆ ಹಾನಿ ಸಂಭವಿಸಿರುತ್ತದೆ.
ರೈತರಿಗೆ ಬೆಳೆ ಪರಿಹಾರ ಬಿಡುಗಡೆ ಮಾಡಿದ್ದು ರೈತರಿಗೆ ಪರಿಹಾರ ಬಾರದಿದ್ದಲ್ಲಿ ಮಾಹಿತಿ ನೀಡಲು ದಾವಣಗೆರೆ ಉಪವಿಭಾಗದ ಮಟ್ಟದಲ್ಲಿ ಸಹಾಯವಾಣಿ ಪ್ರಾರಂಭವಾಗಿದ್ದು, ದಾವಣಗೆರೆ ಹರಿಹರ, ಜಗಳೂರು ತಾಲ್ಲೂಕುಗಳ ರೈತರು ಬೆಳೆ ಪರಿಹಾರಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ:08192-272955 ಗೆ ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆ ಕರೆಮಾಡಬಹುದು ಎಂದು ಉಪವಿಭಾಗಾಧಿಕಾರಿ ದುರ್ಗಾಶ್ರೀ ತಿಳಿಸಿದ್ದಾರೆ.
Advertisement