ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ರೈತರಿಗೆ ಗುಡ್ ನ್ಯೂಸ್.! ನಾಳೆಯಿಂದ ಪೋಡಿ ದುರಸ್ತಿ ಅಭಿಯಾನ ಪ್ರಾರಂಭ.!

08:12 AM Sep 01, 2024 IST | BC Suddi
Advertisement

ಬೆಂಗಳೂರು: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ರೈತರಿಗೆ ಗುಡ್ ನ್ಯೂಸದ ನೀಡಿದ್ದಾರೆ.  ಸೆಪ್ಟೆಂಬರ್ 2 ರಿಂದ ನಾಳೆ ಪೋಡಿ ದುರಸ್ತಿ ಅಭಿಯಾನ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.

Advertisement

ರಾಜ್ಯದಲ್ಲಿ ಸುಮಾರು 10 ಲಕ್ಷ ರೈತರಿಗೆ ದಶಕಗಳ ಹಿಂದೆ ಮಂಜೂರಾಗಿದ್ದ ಸರ್ಕಾರಿ ಜಮೀನು ಸಹ, ಪೋಡಿ ದುರಸ್ತಿ ಆಗದೆ ಬಾಕಿ ಉಳಿದಿದೆ. ತೊಂದರೆ ಅನುಭವಿಸುತ್ತಿರುವ ರೈತರಿಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಅಕ್ರಮ -ಸಕ್ರಮದಡಿ ಮಂಜೂರಾಗಿದ್ದರೂ, ದಶಕಗಳಿಂದ ಪೋಡಿ ದುರಸ್ತಿ ಬಾಕಿ ಇದ್ದು, ಲಕ್ಷಾಂತರ ರೈತರು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಕೆಲವರ ಜಮೀನು ಮಾತ್ರ ಪೋಡಿ ದುರಸ್ತಿಯಾಗಿದೆ. ಇದರಿಂದ ಅನೇಕ ರೈತರು ತೊಂದರೆಗೊಳಗಾಗಿದ್ದಾರೆ. ಸೆಪ್ಟೆಂಬರ್ 2ರಿಂದ ಅಭಿಯಾನ ಮಾದರಿಯಲ್ಲಿ ಒಂದರಿಂದ ಐದು ನಮೂನೆ ಪೋಡಿ ದುರಸ್ತಿ ಕೆಲಸಕ್ಕೆ ಮುಂದಾಗಬೇಕು ಎಂದು ತಿಳಿಸಿದ್ದಾರೆ.

ಮಂಜೂರಾದ ಜಮೀನಿಗೆ ಪೋಡಿಯಾಗದ ಕಾರಣ ಆರ್.ಟಿ.ಸಿ.ಯೂ ಇಲ್ಲದಂತಾಗಿದ್ದು, ರೈತರಿಗೆ ತೊಂದರೆಯಾಗಿದೆ. ಕಚೇರಿಗಳಿಗೆ ಅಲೆದು ಸುಸ್ತಾಗಿದ್ದಾರೆ. ಮುಖ್ಯಮಂತ್ರಿಗಳ ಸೂಚನೆಯಂತೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕ್ರಮ ವಹಿಸಲಾಗಿದೆ. ಸಮಸ್ಯೆ ಮುಕ್ತ ಪೋಡಿ ದುರಸ್ತಿಗೆ ನಮೂನೆ ಒಂದರಿಂದ ಐದರ ಕಡತಗಳನ್ನು ಡಿಜಿಟಲ್ ಕಡತಗಳನ್ನಾಗಿ ತಯಾರಿಸಲಾಗುತ್ತದೆ. ಡಿಜಿಟಲ್ ಆ್ಯಪ್ ನಿಂದ ಸರಳ ವೇಗ ಮತ್ತು ಪಾರದರ್ಶಕವಾಗಿ ಮೂಲ ಮಂಜೂರು ದಾಖಲೆ ಸುರಕ್ಷಿತವಾಗಿಡಬಹುದು ಎಂದು ಹೇಳಲಾಗಿದೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

 

 

 

Tags :
ಬೆಂಗಳೂರು: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ರೈತರಿಗೆ ಗುಡ್ ನ್ಯೂಸದ ನೀಡಿದ್ದಾರೆ. ಸೆಪ್ಟೆಂಬರ್ 2 ರಿಂದ ನಾಳೆ ಪೋಡಿ ದುರಸ್ತಿ ಅಭಿಯಾನ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.
Advertisement
Next Article