For the best experience, open
https://m.bcsuddi.com
on your mobile browser.
Advertisement

ರುಚಿಕರವಾದ ಸೋಯಾ ಬೀನ್ ಕಬಾಬ್ ಮಾಡುವ ವಿಧಾನ

09:09 AM Jul 26, 2024 IST | Bcsuddi
ರುಚಿಕರವಾದ ಸೋಯಾ ಬೀನ್ ಕಬಾಬ್ ಮಾಡುವ ವಿಧಾನ
Advertisement

ಬೇಕಾಗುವ ಪದಾರ್ಥಗಳು...

  • ಸೋಯಾ ಬೀನ್- 20-25
  • ಶುಂಠಿ-ಬೆಳ್ಳುಳ್ಳಿ ಪೇಸ್ಟ್-2 ಚಮಚ
  • ಹಸಿ ಮೆಣಸಿನಕಾಯಿ-2
  • ಈರುಳ್ಳಿ- 3
  • ಮೊಸರು-ಸ್ವಲ್ಪ
  • ಕೊತ್ತಂಬರಿ ಸೊಪ್ಪು- ಸ್ವಲ್ಪ
  • ಖಾರದ ಪುಡಿ- ಒಂದು ಚಮಚ
  • ಗರಂ ಮಸಾಲ- ಒಂದೂವರೆ ಚಮಚ
  • ಕಾಳು ಮೆಣಸಿನ ಪುಡಿ- 1 ಚಮಚ
  • ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು
  • ಉಪ್ಪು- ರುಚಿಗೆ ತಕ್ಕಷ್ಟು
  • ಮಾಡುವ ವಿಧಾನ...
    • ಸೋಯಾ ಬೀನ್ ಅನ್ನು 20-25 ನಿಮಿಷ ಬಿಸಿ ನೀರಿನಲ್ಲಿ ನೆನೆಸಿ. ಬಳಿಕ ಹಸಿ ಮೆಣಸಿನಕಾಯಿ, ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಮಿಕ್ಸಿ ಜಾರಿಗೆ ಹಾಕಿ ಪೇಸ್ಟ್ ಮಾಡಿಟ್ಟುಕೊಳ್ಳಿ. ನಂತರ ಇದೇ ಮಿಕ್ಸಿ ಜಾರಿಗೆ ನೆನೆಸಿದ ಸೋಯಾ ಬೀನ್ ಹಾಕಿ ರುಬ್ಬಿಕೊಳ್ಳಿ. ಇದಕ್ಕೆ ಶುಂಠಿ- ಬೆಳ್ಳುಳ್ಳಿ ಪೇಸ್ಟ್. ಖಾರದ ಪುಡಿ, ಗರಂ ಮಸಾಲ, 2 ಚಮಚ ಮೊಸರು, ಕಾಳು ಮೆಣಸಿನ ಪುಡಿ, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ ಅರ್ಧ ಗಂಟೆ ನೆನೆಯಲು ಬಿಡಿ.
    • ಪ್ಯಾನ್ ಬಿಸಿ ಮಾಡಿ, ಅದರಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಮಸಾಲೆಯುಕ್ತ ಸೋಯಾ ಬೀನ್ ನಿಮಗೆ ಬೇಕಾಗ ಆಕಾರದಲ್ಲಿ ತಟ್ಟಿ ಎಣ್ಣೆ ಹಾಕಿ 10 ನಿಮಿಷ ಫ್ರೈ ಮಾಡಿದರೆ ರುಚಿಯಾದ ಸೋಯಾ ಬೀನ್ ಕಬಾಬ್ ಸವಿಯಲು ಸಿದ್ಧ.
Author Image

Advertisement