ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ರುಚಿಕರವಾದ ಸುಲಭವಾಗಿ ಮಾಡಬಹುದಾದ ಸಿಂಪಲ್​ ಮಟನ್​ ಬಿರಿಯಾನಿ ಮಾಡುವ ವಿಧಾನ

09:11 AM Mar 12, 2024 IST | Bcsuddi
Advertisement

ಬೇಕಾಗುವ ಸಾಮಗ್ರಿ :

Advertisement

ಮಟನ್​​ 500 ಗ್ರಾಂ, 2 ಕಪ್​ ಅಕ್ಕಿ, 2 ಲವಂಗ, 2 ದಾಲ್ಚಿನ್ನಿ ಎಲೆ, ಹಸಿ ಮೆಣಸು 5, ಈರುಳ್ಳಿ 2, ಖಾರದಪುರಿ 3 ಚಮಚ, ಗರಂ ಮಸಾಲಾ 1 ಚಮಚ, ಮೊಸರು 2 ಚಮಚ, ಎಣ್ಣೆ 2 ಚಮಚ, ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ :

ಪ್ರೆಶರ್​ ಕುಕ್ಕರ್​ನಲ್ಲಿ ಸ್ವಲ್ಪ ಎಣ್ಣೆಯನ್ನ ಹಾಕಿ. ಎಣ್ಣೆ ಬಿಸಿಯಾದ ಬಳಿಕ ಇದಕ್ಕೆ ಲವಂಗ ಹಾಗೂ ಪಲಾವ್​ ಎಲೆಯನ್ನ ಹಾಕಿ. ಇದಾದ ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್​, ಹಸಿ ಮೆಣಸಿನಕಾಯಿ ಹಾಗೂ ಈರುಳ್ಳಿ ಹಾಕಿ ಹುರಿದುಕೊಳ್ಳಿ. ಈರುಳ್ಳಿ ಹೊಂಬಣ್ಣಕ್ಕೆ ಬಂದ ಬಳಿಕ ಖಾರದ ಪುಡಿ, ಗರಂ ಮಸಾಲಾವನ್ನ ಹಾಕಿ. ಇದಕ್ಕೆ ಮಟನ್​​​ ಹಾಕಿ ನೀರನ್ನ ಸೇರಿಸಿ 3 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಮಟನ್​ ಕಂದು ಬಣ್ಣಕ್ಕೆ ಬರುವವರೆಗೂ ಹೆಚ್ಚಿನ ಉರಿಯಲ್ಲಿ ಬೇಯಿಸಿಕೊಳ್ಳಿ. ಇದೀಗ ಮೊಸರನ್ನ ಸೇರಿಸಿ. ಬಳಿಕ 1 ಚಮಚ ಖಾರದ ಪುಡಿ, ಅರ್ಧ ಚಮಚ ಗರಂ ಮಸಾಲಾ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನ ಹಾಕಿ. ಇದೀಗ ತೊಳೆದು ನೆನೆಸಿಟ್ಟ ಅಕ್ಕಿಯನ್ನ ಹಾಕಿಕೊಳ್ಳಿ. ನೀರು ಕುದಿ ಬಂದ ಬಳಿಕ ಕುಕ್ಕರ್​ ಮುಚ್ಚಳವನ್ನ ಹಾಕಿ. 3 ವಿಶಲ್​ ಬಾರಿಸಿದ ಬಳಿಕ ಸ್ಟೌ ಆಫ್​ ಮಾಡಿ ಬಿಸಿ ಬಿಸಿಯಾಗಿ ಬಡಿಸಿ.

Advertisement
Next Article