For the best experience, open
https://m.bcsuddi.com
on your mobile browser.
Advertisement

ರುಚಿಕರವಾದ ಶಾಹಿ ಪನೀರ್ ಮಾಡುವ ವಿಧಾನ

09:01 AM Aug 08, 2024 IST | BC Suddi
ರುಚಿಕರವಾದ ಶಾಹಿ ಪನೀರ್ ಮಾಡುವ ವಿಧಾನ
Advertisement

ಬೇಕಾಗುವ ಪದಾರ್ಥಗಳು...

  • ಬೆಣ್ಣೆ – 1 ಚಮಚ
  • ಹೆಚ್ಚಿದ ಈರುಳ್ಳಿ – 2
  • ಹೆಚ್ಚಿದ ಟೊಮೆಟೊ – 4
  • ಶಾಹಿ ಜೀರಿಗೆ – ಅರ್ಧ ಚಮಚ
  • ಚೆಕ್ಕೆ – 1
  • ಲವಂಗ- 3
  • ಏಲಕ್ಕಿ – 2
  • ಕಲ್ಲಂಗಡಿ ಬೀಜ – 1 ಚಮಚ
  • ಬಾದಾಮಿ, ಗೋಡಂಬಿ-  ಸ್ವಲ್ಪ
  • ನೀರು – 1 ಬಟ್ಟಲು
  • ಹಚ್ಚಿದ ಕೊತ್ತಂಬರಿ ಸೊಪ್ಪು- ಸ್ವಲ್ಪ
  • ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
  • ಪನೀರ್ ಕ್ಯೂಬ್ಸ್- 200 ಗ್ರಾಂ
  • ಅಚ್ಚಖಾರದ ಪುಡಿ – 1 ಚಮಚ
  • ಅರಶಿಣ – ಕಾಲು ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಕೇಸರಿ – ಸ್ವಲ್ಪ
  • ಫ್ರೆಶ್ ಕ್ರೀಮ್ – 2 ಚಮಚ

ಮಾಡುವ ವಿಧಾನ...

  • ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಾಲೆ ಇಟ್ಟು, ಒಂದು ಚಮಚ ಬೆಣ್ಣೆ ಹಾಕಿಕೊಂಡು ಅದು ಕರಗಿದ ಬಳಿಕ ಹೆಚ್ಚಿದ ಈರುಳ್ಳಿ, ಟೊಮೆಟೊ ಹಾಕಿಕೊಂಡು ಒಂದು ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.
  • ಬಳಿಕ ಇದಕ್ಕೆ ಶಾಹಿ ಜೀರಿಗೆ, ಚೆಕ್ಕೆ, ಲವಂಗ, ಏಲಕ್ಕಿಯನ್ನು ಹಾಕಿಕೊಂಡು ಬಳಿಕ ಅದಕ್ಕೆ ಕಲ್ಲಂಗಡಿ ಬೀಜ, ಬಾದಾಮಿ, ಗೋಡಂಬಿ ಹಾಕಿಕೊಂಡು ಮತ್ತೆ ಹುರಿದುಕೊಳ್ಳಿ.
  • ಹುರಿದ ಮೇಲೆ ಅದಕ್ಕೆ 1 ಬಟ್ಟಲು ನೀರನ್ನು ಸೇರಿಸಿಕೊಂಡು ಮುಚ್ಚಳ ಮುಚ್ಚಿ 15 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
  • ನಂತರ ಮಿಶ್ರಣಕ್ಕೆ ಹಾಕಿದ್ದ ಮಸಾಲೆ ಪದಾರ್ಥಗಳು ಅಂದರೆ ಚೆಕ್ಕೆ, ಲವಂಗ, ಏಲಕ್ಕಿಯನ್ನು ತೆಗೆದಿಡಿ.
  • ಬಳಿಕ ಮಿಶ್ರಣವನ್ನು ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ಅದನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ಚನ್ನಾಗಿ ರುಬ್ಬಿಕೊಳ್ಳಿ. ರುಬ್ಬಿದ ಬಳಿಕ ಅದನ್ನು ಸೋಸಿಕೊಳ್ಳಿ.
  • ಬಳಿಕ ಬಾಣಾಲೆಗೆ ಸ್ವಲ್ಪ ಬೆಣ್ಣೆ ಹಾಕಿಕೊಂಡು ಕರಗಿದ ಮೇಲೆ ಅದಕ್ಕೆ ಕೊತ್ತಂಬರಿ ಸೊಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಂಡು ಹಸಿವಾಸನೆ ಹೋಗುವವರೆಗೆ ಫ್ರೈ ಮಾಡಿಕೊಳ್ಳಿ.
  • ಅದಕ್ಕೆ ಪನೀರ್ ಕ್ಯೂಬ್ಸ್ ಹಾಕಿಕೊಂಡು ಒಂದು ನಿಮಿಷಗಳ ಕಾಲ ಹುರಿದುಕೊಳ್ಳಿ. ಬಳಿಕ ಅದಕ್ಕೆ ಅಚ್ಚಖಾರದ ಪುಡಿ, ಅರಶಿಣ ಮತ್ತು ಉಪ್ಪು ಹಾಗೂ ನೀರಲ್ಲಿ ನೆನೆಸಿದ ಕೇಸರಿಯನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
  • ನಂತರ ಇದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿಕೊಳ್ಳಿ. ಬಳಿಕ ಸ್ವಲ್ಪ ಸಕ್ಕರೆ ಹಾಗೂ ಫ್ರೆಶ್ ಕ್ರೀಮ್ ಸೇರಿಸಿಕೊಂಡು ಮಿಶ್ರಣ ಸ್ವಲ್ಪ ದಪ್ಪವಾಗುವವರೆಗೆ ತಿರುವಿಕೊಳ್ಳಿ. ಇದೀಗ ರುಚಿಕರವಾದ ಶಾಹಿ ಪನೀರ್ ಸವಿಯಲು ಸಿದ್ಧ.
Advertisement
Author Image

Advertisement