ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ರುಚಿಕರವಾದ ವಾಂಗಿಬಾತ್ ಮಾಡುವ ವಿಧಾನ

09:04 AM May 15, 2024 IST | Bcsuddi
Advertisement

ವಾಂಗಿಬಾತ್ ಪ್ರಿಯರಿಗೆ ಇಲ್ಲಿ ಸುಲಭವಾಗಿ ಮಾಡುವ ವಾಂಗಿಬಾತ್ ವಿಧಾನ ಇದೆ. ಮನೆಯಲ್ಲಿ ಮಾಡಿ ನೋಡಿ.

Advertisement

ಬಾಸುಮತಿ ಅಕ್ಕಿ-1 ಕಪ್, ಬದನೆಕಾಯಿ-3, ಟೊಮೆಟೊ-3, ಹಸಿಮೆಣಸು-1, ಶುಂಠಿ-1 ಇಂಚು (ಚಿಕ್ಕದ್ದಾಗಿ ಕತ್ತರಿಸಿದ್ದು), ಅರಿಶಿನ-1/4 ಟೀ ಸ್ಪೂನ್, ಉಪ್ಪು -ರುಚಿಗೆ ತಕ್ಕಷ್ಟು, ಕೊತ್ತಂಬರಿ ಬೀಜ-1 ಟೇಬಲ್ ಸ್ಪೂನ್, ಕಡಲೆಬೇಳೆ-1 ಟೇಬಲ್ ಸ್ಪೂನ್, ಉದ್ದಿನಬೇಳೆ-2 ಟೀ ಸ್ಪೂನ್, ಒಣಮೆಣಸು-3, ಕಾಳುಮೆಣಸು-1/4 ಟೀ ಸ್ಪೂನ್, ತೆಂಗಿನಕಾಯಿ ತುರಿ-1 ಟೇಬಲ್ ಸ್ಪೂನ್, ಸಾಸಿವೆ-1/2 ಟೀ ಸ್ಪೂನ್, ಎಣ್ಣೆ-2 ಟೇಬಲ್ ಸ್ಪೂನ್, ಉದ್ದಿನಬೇಳೆ-1/2 ಟೀ ಸ್ಪೂನ್, ಇಂಗು-1/4 ಟೀ ಸ್ಪೂನ್, ಕರಿಬೇವು-10 ಎಸಳು. ಬಾಸುಮತಿ ಅಕ್ಕಿಯನ್ನು ½ ಗಂಟೆಗಳ ಕಾಲ ನೆನಸಿ.

ನೀರನ್ನು ಬಸಿದಿಟ್ಟುಕೊಳ್ಳಿ. ನಂತರ ಒಂದು ಪಾತ್ರೆಗೆ 2 ಕಪ್ ನೀರು ಹಾಕಿ ಈ ಅಕ್ಕಿಯನ್ನು ಬೇಯಿಸಿಕೊಳ್ಳಿ.ಈರುಳ್ಳಿ, ಟೊಮೆಟೊ ಅನ್ನು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ಬದನೆಕಾಯಿಯನ್ನು ಹದ ಗಾತ್ರದಲ್ಲಿ ಕತ್ತರಿಸಿಕೊಳ್ಳಿ. ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 1 ಟೀ ಸ್ಪೂನ್ ಎಣ್ಣೆ ಹಾಕಿ ಅದು ಬಿಸಿಯಾಗುತ್ತಿದ್ದಂತೆ ಒಣಮೆಣಸು, ಧನಿಯಾ ಕಾಳು, ಕಡಲೆಬೇಳೆ, ಉದ್ದಿನಬೇಳೆ, ಕಾಳುಮೆಣಸು ಹಾಕಿ ಫ್ರೈ ಮಾಡಿ. ನಂತರ ತೆಂಗಿನಕಾಯಿ ತುರಿ ಸೇರಿಸಿ ತುಸು ಫ್ರೈ ಮಾಡಿ. ಗ್ಯಾಸ್ ಆಫ್ ಮಾಡಿ. ಇದು ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಗ್ಯಾಸ್ ಮೇಲೆ ಬಾಣಲೆ ಇಟ್ಟು ಅದಕ್ಕೆ 2 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಅದು ಬಿಸಿಯಾಗುತ್ತಿದ್ದಂತೆ ½ ಟೀ ಸ್ಪೂನ್ ಸಾಸಿವೆ, ½ ಟೀ ಸ್ಪೂನ್ ಉದ್ದಿನಬೇಳೆ ½ ಟೀ ಸ್ಪೂನ್ ಕಡಲೆಬೇಳೆ, ಇಂಗು, ಕರಿಬೇವು ಹಾಕಿ. ಇದಕ್ಕೆ ಈರುಳ್ಳಿ, ಹಸಿಮೆಣಸು, ಶುಂಠಿ ಹಾಕಿ ಕೆಂಪಾಗುವರೆಗೆ ಫ್ರೈ ಮಾಡಿ. ತದ ನಂತರ ಬದನೆಕಾಯಿ, ಅರಿಶಿನ, ತುಸು ಉಪ್ಪುಹಾಕಿ ಫ್ರೈ ಮಾಡಿಕೊಳ್ಳಿ. ಬದನೆಕಾಯಿ ತುಸು ಬೆಂದು ಬರುತ್ತಿದ್ದಂತೆ ಟೊಮೆಟೊ, ಮಸಾಲೆ ಪುಡಿ ಹಾಕಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಬೇಯಿಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನಂತರ ಇದು ಬೆಂದ ಬಳಿಕ ಮಾಡಿಟ್ಟುಕೊಂಡ ಅನ್ನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ಕೊತ್ತಂಬರಿಸೊಪ್ಪು ಸೇರಿಸಿ ಗ್ಯಾಸ್ ಆಫ್ ಮಾಡಿ.

Advertisement
Next Article