For the best experience, open
https://m.bcsuddi.com
on your mobile browser.
Advertisement

ರುಚಿಕರವಾದ ಮೆಂತ್ಯ ಸೊಪ್ಪಿನ ಕಟ್ಲೆಟ್ ಮಾಡುವ ವಿಧಾನ

09:11 AM Jun 15, 2024 IST | Bcsuddi
ರುಚಿಕರವಾದ ಮೆಂತ್ಯ ಸೊಪ್ಪಿನ ಕಟ್ಲೆಟ್ ಮಾಡುವ ವಿಧಾನ
Advertisement

ಬೇಕಾಗುವ ಪದಾರ್ಥಗಳು...

  • ಮೆಂತ್ಯೆ ಸೊಪ್ಪು-1 ಕಟ್ಟು
  • ಪಾಲಾಕು- 1 ಕಟ್ಟು
  • ಪುದೀನಾ-1 ಹಿಡಿ
  • ಕೊತ್ತಂಬರಿ ಸೊಪ್ಪು-1 ಹಿಡಿ
  • ಆಲೂಗಡ್ಡೆ 3 ರಿಂದ 4 (ಬೇಯಿಸಿದ್ದು)
  • ಅಚ್ಚಖಾರದ ಪುಡಿ- 2 ಚಮಚ
  • ಸಣ್ಣ ರವೆ- ಅಗತ್ಯಕ್ಕೆ ತಕ್ಕಷ್ಟು
  • ಜೀರಿಗೆ- ಸ್ವಲ್ಪ
  • ದನಿಯಾ ಪುಡಿ-1 ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಖಾರದ ಪುಡಿ- ಸ್ವಲ್ಪ
  • ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಸ್ವಲ್ಪ
  • ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
  • ಮಾಡುವ ವಿಧಾನ...

    • ಮೊದಲಿಗೆ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಕಾದ ನಂತರ ಜೀರಿಗೆ ಹಾಗೂ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆಂಪಗಾದ ಬಳಿಕ ಸಣ್ಣಗೆ ಹೆಚ್ಚಿದ ಸೊಪ್ಪುಗಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ ಮಾಡಿ.
    • ನಂತರ ಉಪ್ಪು, ಖಾರದ ಪುಡಿ, ದನಿಯಾ ಪುಡಿ ಹಾಗೂ ಬೇಯಿಸಿದ್ದ ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ವೇಳೆ ನೀರು ಹಾಕಬಾರದು. ಏಕೆಂದರೆ ಸೊಪ್ಪಿನಲ್ಲಿ ನೀರಿನ ಅಂಶವಿರುತ್ತದೆ.
    • ನಂತರ ಪಾಟೀಸ್ ತರ ಮಾಡಿಕೊಂಡು ಸಣ್ಣ ರವೆಯಲ್ಲಿ ಅದ್ದಿ ಕಾದ ತವೆಯಲ್ಲಿ  ಒಟ್ಟಿಗೆ 6, 7 ಪಾಟೀಸನ್ನು 2,3 ಚಮಚ ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿದರೆ ರುಚಿಕರವಾದ ಮೆಂತ್ಯ ಸೊಪ್ಪಿನ ಕಟ್ಲೆಟ್ ಸವಿಯಲು ಸಿದ್ಧ.
Advertisement
Author Image

Advertisement