For the best experience, open
https://m.bcsuddi.com
on your mobile browser.
Advertisement

ರುಚಿಕರವಾದ ಮಾವಿನ ಕಾಯಿ ರಸಂ ಮಾಡುವ ವಿಧಾನ

09:08 AM May 27, 2024 IST | Bcsuddi
ರುಚಿಕರವಾದ ಮಾವಿನ ಕಾಯಿ ರಸಂ ಮಾಡುವ ವಿಧಾನ
Advertisement

ಬೇಕಾಗುವ ಪದಾರ್ಥಗಳು...

  • ಮಾವಿನಕಾಯಿ– 1
  • ತೊಗರಿಬೇಳೆ – ಕಾಲು ಕಪ್‌ (ಬೇಯಿಸಿಕೊಂಡಿದ್ದು)
  • ತುಪ್ಪ– 1 ಚಮಚ
  • ಸಾಸಿವೆ – ಅರ್ಧ ಚಮಚ
  • ಜೀರಿಗೆ – 1 ಟೀ ಚಮಚ
  • ಕರಿಬೇವು – 5 ರಿಂದ 6
  • ಹಸಿಮೆಣಸಿನಕಾಯಿ – 2
  • ಇಂಗು– ಚಿಟಿಕೆ
  • ಶುಂಠಿ – 1 ಇಂಚು
  • ಟೊಮೆಟೊ – 1 ದೊಡ್ಡದು (ಸಣ್ಣಗೆ ಹೆಚ್ಚಿದ್ದು)
  • ಜೀರಿಗೆ ಪುಡಿ– 1 ಚಮಚ
  • ನಿಂಬೆರಸ– 1 ಚಮಚ
  • ಕಾಳುಮೆಣಸಿನ ಪುಡಿ – ಚಿಟಿಕೆ
  • ಅರಿಶಿನ ಪುಡಿ – ಚಿಟಿಕೆ
  • ದನಿಯಾ ಪುಡಿ– 1 ಚಮಚ
  • ಬೆಲ್ಲ – 1 ಸಣ್ಣ ತುಂಡು
  • ಉಪ್ಪು – ರುಚಿಗೆ ತಕ್ಕಷ್ಟು
  • ಕೊತ್ತಂಬರಿ ಸೊಪ್ಪು – 2 ಚಮಚ (ಹೆಚ್ಚಿದ್ದು)
  • ಒಣಗಿದ ಮೆಣಸಿನಕಾಯಿ- 1

ಮಾಡುವ ವಿಧಾನ...

  • ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ಕುಕ್ಕರ್‌ಗೆ ಹಾಕಿ 2 ಲೋಟ ನೀರು ಸೇರಿಸಿ 5 ರಿಂದ 6 ವಿಶಲ್‌ ಕೂಗಿಸಿ. ವಿಶಲ್‌ ಆರಿದ ಮೇಲೆ ಸಿಪ್ಪೆ ಹಾಗೂ ಗೊರಟೆ ತೆಗೆದು ಮಾವಿನ ಪಲ್ಪ್‌ ಅನ್ನ ತೆಗೆದು ಮಿಕ್ಸರ್‌ ಜಾರ್'ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ತೊಗರಿಬೇಳೆಯನ್ನು ನುಣ್ಣಗೆ ಬೇಯಿಸಿಕೊಳ್ಳಿ.
  • ಈಗ ಪ್ಯಾನ್‌ವೊಂದಕ್ಕೆ ತುಪ್ಪ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಗೂ ಜೀರಿಗೆ ಹಾಕಿ ಸಿಡಿಸಿ. ಅದಕ್ಕೆ ಇಂಗು, ಕರಿಬೇವು, ಹಸಿಮೆಣಸಿನಕಾಯಿ, ಶುಂಠಿ ಎಲ್ಲವನ್ನೂ ಹಾಕಿ ಕೈಯಾಡಿಸಿ.
  • ಅದಕ್ಕೆ ಮಾವಿನಕಾಯಿ ತಿರುಳು, ಟೊಮೆಟೊ, ನಿಂಬೆರಸ, ಕಾಳುಮೆಣಸಿನಪುಡಿ, ಅರಿಸಿನ ಪುಡಿ, ಜೀರಿಗೆ ಪುಡಿ, ಬೆಲ್ಲ, ಬೇಯಿಸಿದ ತೊಗರಿಬೇಳೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
  • ನಂತರ ಅಗತ್ಯವಿದ್ದಷ್ಟು ನೀರು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿ. ಇದೀಗ ರುಚಿಕರವಾದ ಮಾವಿನಕಾಯಿ ರಸಂ ಸವಿಯಲು ಸಿದ್ಧ.
Advertisement
Author Image

Advertisement