For the best experience, open
https://m.bcsuddi.com
on your mobile browser.
Advertisement

ರುಚಿಕರವಾದ ಮಶ್ರೂಮ್ ಬಿರಿಯಾನಿ ಮಾಡುವ ವಿಧಾನ

09:17 AM Aug 29, 2024 IST | BC Suddi
ರುಚಿಕರವಾದ ಮಶ್ರೂಮ್ ಬಿರಿಯಾನಿ ಮಾಡುವ ವಿಧಾನ
Advertisement

ಬೇಕಾಗುವ ಪದಾರ್ಥಗಳು

ಅಕ್ಕಿ- 1 ಬಟ್ಟಲು ಮಶ್ರೂಮ್ - 150 ಗ್ರಾಂ ಬಟಾಣಿ - 1 ಬಟ್ಟಲು ಪುದೀನಾ ಸೊಪ್ಪು- ಸ್ವಲ್ಪ ಕೊತ್ತಂಬರಿ ಸೊಪ್ಪು- ಸ್ವಲ್ಪ ಈರುಳ್ಳಿ- 1 ಟೊಮೆಟೋ -2 ಅಡುಗೆ ಎಣ್ಣೆ- ಸ್ವಲ್ಪ ತುಪ್ಪ- ಸ್ವಲ್ಪ ನಿಂಬೆ ಹಣ್ಣು- ಅರ್ಧ ಮೊಸರು- 1 ಬಟ್ಟಲು ಹಸಿ ಮೆಣಸಿನಕಾಯಿ- 2-3 ಚಕ್ಕೆ, ಲವಂಗ, ಏಲಕ್ಕಿ- ಸ್ವಲ್ಪ ಕಸೂರಿ ಮೇಥಿ- ಸ್ವಲ್ಪ ಖಾರದ ಪುಡಿ- 1 ಚಮಚ ಗರಂ ಮಸಾಲೆ- ಕಾಲು ಚಮಚ ಉಪ್ಪು- ರುಚಿಗೆ ತಕ್ಕಷ್ಟು ಶುಂಠಿ-ಬೆಳ್ಳುಳ್ಳಿ ಪೇಸ್ಟ್ - ಸ್ವಲ್ಪ ದನಿಯಾ ಪುಡಿ- ಅರ್ಧ ಚಮಚ

ಮಾಡುವ ವಿಧಾನ...

Advertisement

ಮೊದಲು ಒಲೆಯ ಮೇಲೆ ಒಂದು ಕುಕ್ಕರ್​ ಇಟ್ಟು ಅಡುಗೆ ಎಣ್ಣೆ ಹಾಕಿ. ಅದು ಕಾದ ಮೇಲೆ ಸ್ವಲ್ಪ ಎಣ್ಣೆ, ಸ್ವಲ್ಪ ತುಪ್ಪ, ಚಕ್ಕೆ, ಲವಂಗ, ಏಲಕ್ಕಿ, ಕಸೂರಿ ಮೇಥಿ, ಈರುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಫ್ರೈ ಮಾಡಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಪುದೀನಾ ಸೊಪ್ಪು, ಟೊಮೆಟೋ, ಕೊತ್ತಂಬರಿ ಸೊಪ್ಪು, ಖಾರದ ಪುಡಿ, ಗರಂ ಮಸಾಲೆ, ದನಿಯಾ ಪುಡಿ, ಮಶ್ರೂಮ್, ಬಟಾಣಿ ಹಾಕಿ ಫ್ರೈ ಮಾಡಿ. ನಂತರ ಉಪ್ಪು, ಮೊಸರು, ನೆನೆಸಿದ ಅಕ್ಕಿ ಅಳತೆ ನೀರು, ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಮಿಕ್ಸ್​ ಮಾಡಿ, ಕುಕ್ಕರ್​ ಮುಚ್ಚಳ ಮುಚ್ಚಿ 1 ವಿಜಿಲ್​ ಬರಬೇಕು. ಈಗ ರುಚಿಕರವಾದ ಮಶ್ರೂಮ್​ ಬಿರಿಯಾನಿ ಸವಿಯಲು ಸಿದ್ಧ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Author Image

Advertisement