ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ರುಚಿಕರವಾದ ಮಶ್ರೂಮ್ ಪೆಪ್ಪರ್ ಫ್ರೈ ಮಾಡುವ ವಿಧಾನ

09:02 AM Aug 23, 2024 IST | BC Suddi
Advertisement

ಬೇಕಾಗುವ ಪದಾರ್ಥಗಳು

Advertisement

  • ಎಣ್ಣೆ- 3-4 ಚಮಚ
  • ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 2
  • ಕರಿಬೇವು-ಸ್ವಲ್ಪ
  • ಹಸಿಮೆಣಸಿನ ಕಾಯಿ-3-4
  • ಅಣಬೆ- 400 ಗ್ರಾಂ
  • ಉಪ್ಪು-ರುಚಿಗೆತಕ್ಕಷ್ಟು
  • ಅರಿಶಿನದ ಪುಡಿ- ಸ್ವಲ್ಪ
  • ಕಾಳುಮೆಣಸಿನ ಪುಡಿ- 3-4 ಚಮಚ
  • ಕೊತ್ತಂಬರಿ ಸೊಪ್ಪು- ಸ್ವಲ್ಪ
  • ನಿಂಬೆಹಣ್ಣಿನ ರಸ- ಅರ್ಧ ಚಮಚ

ಮಾಡುವ ವಿಧಾನ...

  • ಮೊದಲಿಗೆ ಅಣಬೆಯನ್ನು ಚೆನ್ನಾಗಿ ತೊಳೆದು ಕತ್ತರಿಸಿಕೊಳ್ಳಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಕಾಯಲು ಬಿಡಿ.
  • ನಂತರ ಕರಿಬೇವು, ಈರುಳ್ಳಿ ಹಸಿಮೆಣಸಿನ ಕಾಯಿ ಹಾಗಿ ಕೆಂಪಗೆ ಹುರಿದುಕೊಳ್ಳಿ. ನಂತರ ಅಣಬೆ ಹಾಗೂ ಉಪ್ಪು, ಅರಿಶಿನದ ಪುಡಿ ಹಾಕಿ 3 ನಿಮಿಷ ಬೇಯಿಸಿಕೊಳ್ಳಿ. ನಂತರ ಅಣಬೆಯಲ್ಲಿ ನೀರು ಬಿಟ್ಟುಕೊಳ್ಳುತ್ತದೆ.
  • ಬಳಿಕ ಕಾಳು ಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಮತ್ತೆ 3 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಗೂ ನಿಂಬೆಹಣ್ಣಿನ ರಸ ಹಾಕಿ ಮಿಶ್ರಣ ಮಾಡಿದರೆ ಅಣಬೆ ಪೆಪ್ಪರ್ ಫ್ರೈ ಸವಿಯಲು ಸಿದ್ಧ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

Advertisement
Next Article