ರುಚಿಕರವಾದ ಬಾಳೆ ಹಣ್ಣಿನ ಹಲ್ವಾ ಮಾಡುವ ವಿಧಾನ
09:16 AM Aug 27, 2024 IST | BC Suddi
Advertisement
ಬೇಕಾಗುವ ಪದಾರ್ಥಗಳು...
- ಗೋಧಿ ಹಿಟ್ಟು- 3 ಬಟ್ಟಲು
- ಸಕ್ಕರೆ ಅಥವಾ ಬೆಲ್ಲ- 3 ಬಟ್ಟಲು
- ಬಾಳೆ ಹಣ್ಣು- 5
- ತುಪ್ಪ- ಎರಡೂವರೆ ಬಟ್ಟಲು
- ಹಾಲು- 1 ಬಟ್ಟಲು
- ದ್ರಾಕ್ಷಿ-ಗೋಡಂಬಿ-ಸ್ವಲ್ಪ
- ಉಪ್ಪು- ಚಿಟಿಕೆಯಷ್ಟು
ಮಾಡುವ ವಿಧಾನ...
- ಒಂದು ಬಾಣಲೆಗೆ ತುಪ್ಪ ಹಾಕಿ ಗೋಧಿ ಹಿಟ್ಟು ಸೇರಿಸಿ ಪರಿಮಳ ಬರುವಂತೆ ಹುರಿಯಿರಿ.
- ಸಣ್ಣಗೆ ಕತ್ತರಿಸಿದ ಬಾಳೆಹಣ್ಣಿನ ಹೋಳುಗಳನ್ನು ಸೇರಿಸಿ ಮತ್ತೆ ಹುರಿಯಿರಿ. ನಂತರ ಎರಡು ಕಪ್ ಬಿಸಿ ನೀರು ಹಾಕಿ ಸಣ್ಣ ಉರಿಯಲ್ಲಿ ತಳ ಹಿಡಿಯದಂತೆ ಬೇಯಿಸಿ.
- ನಂತರ ಹಾಲು, ಸಕ್ಕರೆ, ಉಪ್ಪು ಹಾಕಿ ಚೆನ್ನಾಗಿ ಕೆದಕಿ ಬೇಯಿಸಿ. ಗಟ್ಟಿಯಾದ ನಂತರ ತುಪ್ಪ ಸವರಿದ ಬಟ್ಟಲಿಗೆ ಹಾಕಿ ಚಾಕುವಿನಿಂದ ಬೇಕಾದ ಆಕಾರದಲ್ಲಿ ಕತ್ತರಿಸಿ. ಮೇಲೆ ತುಪ್ಪದಲ್ಲಿ ಕರಿದ ದ್ರಾಕ್ಷಿ, ಗೋಡಂಬಿ ಅಂಟಿಸಿ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.
Advertisement