ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ರುಚಿಕರವಾದ ಪಂಜಾಬಿ ಸ್ಟೈಲ್ ಬೆಂಡೆಕಾಯಿ ಮಸಾಲೆ ಮಾಡುವ ವಿಧಾನ

09:04 AM Jul 21, 2024 IST | Bcsuddi
Advertisement

ಬೇಕಾಗುವ ಪದಾರ್ಥಗಳು...

Advertisement

  • ಬೆಂಡೆಕಾಯಿ- ಅರ್ಧ ಕೆಜಿ
  • ಎಣ್ಣೆ- ಸ್ವಲ್ಪ
  • ಜೀರಿಗೆ- ಸ್ವಲಪ
  • ಈರುಳ್ಳಿ- 3 (ಸಣ್ಣಗೆ ಕತ್ತರಿಸಿದ್ದು)
  • ಕರಿಬೇವು-ಸ್ವಲ್ಪ
  • ಶುಂಠಿ, ಬೆಳ್ಳುಳ್ಳು ಪೇಸ್ಡ್- ಅರ್ಧ ಚಮಚ
  • ಅಚ್ಚ ಖಾರದ ಪುಡಿ- ಅರ್ಧ ಚಮಚ
  • ದನಿಯಾ ಪುಡಿ- ಅರ್ಧ ಚಮಚ
  • ಜೀರಿಗೆ ಪುಡಿ- ಅರ್ಧ ಚಮಚ
  • ಗರಂ ಮಸಾಲಾ ಪುಡಿ- ಅರ್ಧ ಚಮಚ
  • ಅರಿಶಿಣ- ಕಾಲು ಚಮಚ
  • ಟೊಮೆಟೋ- ರಸ (2)
  • ಮೊಸರು- ನಾಲ್ಕು ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಕೊತ್ತಂಬರಿ ಸೊಪ್ಪು- ಸ್ವಲ್ಪ

ಮಾಡುವ ವಿಧಾನ...

  • ಮೊದಲಿಗೆ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬೆಂಡೆಕಾಯಿಯನ್ನು ಲೋಳೆ ಹೋಗುವವರೆಗೆ ಹುರಿದಿಟ್ಟುಕೊಳ್ಳಿ.
  • ಇದೇ ಬಾಣಲೆಗೆ 4 ಚಮಚ ಎಣ್ಣೆ ಹಾಕಿ ಜೀರಿಗೆ, ಕರಿಬೇವು ಹಾಗೂ ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಿ.
  • ಇದಕ್ಕೆ ಶುಂಠಿ, ಬೆಳ್ಳುಳ್ಳು ಪೇಸ್ಡ್. ಅಚ್ಚ ಖಾರದ ಪುಡಿ, ದನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ ಪುಡಿ, ಅರಿಶಿಣ ಹಾಗೂ ಟೊಮೆಟೋ ಪ್ಯೂರಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಮುಚ್ಚಳ ಮುಚ್ಚಿ 4 ನಿಮಿಷ ಎಣ್ಣೆ ಬಿಡುವವರೆ ಬೇಯಲು ಬಿಡಿ. ಮಧ್ಯೆ ಮಧ್ಯೆ ಕೈಯಾಡಿಸುತ್ತಿರಿ.
  • ಇದೀಗ ಮೊಸರು, ಉಪ್ಪು ಹಾಗೂ ಹುರಿದಿಟ್ಟುಕೊಂಡ ಬೆಂಡೆಕಾಯಿಯನ್ನು ಹಾಕಿ 4 ನಿಮಿಷ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ಮಧ್ಯೆ ಮಧ್ಯೆ ಕೈಯಾಡಿಸುತ್ತಿರಿ. ಇದೀಗ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಪಂಜಾಬಿ ಸ್ಟೈಲ್ ಬೆಂಡೆಕಾಯಿ ಮಸಾಲೆ ಸವಿಯಲು ಸಿದ್ಧ.
Advertisement
Next Article