ರುಚಿಕರವಾದ ಟೊಮೆಟೋ ದೋಸೆ ಮಾಡುವ ವಿಧಾನ
ಬೇಕಾಗುವ ಸಾಮಾಗ್ರಿಗಳು:
ದೋಸೆ ಹಿಟ್ಟು 1 ಕಪ್, ಟೊಮೆಟೋ – 2, ಶುಂಠಿ – ಅರ್ಧ ಇಂಚು, ಬೆಳ್ಳುಳ್ಳಿ – 1, ಜೀರಿಗೆ – ಸ್ವಲ್ಪ, ಅಚ್ಚಖಾರದ ಪುಡಿ – ½ ಟೀ ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ.
ಮಾಡುವ ವಿಧಾನ:
ಮೊದಲಿಗೆ ಟೊಮ್ಯಾಟೊ, ಅಚ್ಚಖಾರದ ಪುಡಿ, ಜೀರಿಗೆ, ಶುಂಠಿ, ಬೆಳ್ಳುಳ್ಳಿಯನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಮಾಡಿಟ್ಟಿರುವಂತಹ ದೋಸೆ ಹಿಟ್ಟಿಗೆ ರುಬ್ಬಿರುವ ಟೊಮ್ಯಾಟೋ ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. (ದೋಸೆ ಹಿಟ್ಟು ಮಾಡುವುದು 2 ಲೋಟ ದೋಸೆ ಅಕ್ಕಿಗೆ ¼ ಲೋಟ ಉದ್ದಿನ ಬೇಳೆ, ಒಂದು ಟೀ ಸ್ಪೂನ್ ಮೆಂತ್ಯ, 1 ಟೀ ಸ್ಪೂನ್ ಕಡಲೇಬೇಳೆಯನ್ನು ಬೆಳಗ್ಗೆಯಿಂದ ಸಂಜೆವರೆಗೆ ನೆನೆ ಹಾಕಿ. ಸಂಜೆ ಇದನ್ನು ರುಬ್ಬಿ ಪಾತ್ರೆಗೆ ಹಾಕಿಡಿ, ಬೆಳಗ್ಗೆಯಷ್ಟೊತ್ತಿಗೆ ಚೆನ್ನಾಗಿ ಉಬ್ಬಿರುತ್ತೆ. ಇದಕ್ಕೆ ಟೊಮ್ಯೊಟೋ ಪೇಸ್ಟ್ ಹಾಕಿಕೊಂಡು ತಕ್ಷಣಕ್ಕೆ ಮಾಡುವುದು). ಹೆಂಚು ಕಾದ ಬಳಿಕ ಹಿಟ್ಟನ್ನು ಮಸಾಲೆದೋಸೆ ತರಹ ಮಾಡಿ. ಎಣ್ಣೆ ಬದಲು ತುಪ್ಪ ಕೂಡ ಸವರಬಹುದು. ಸೆಟ್ ದೋಸೆ ತರಹ ಕೂಡ ಮಾಡಿಕೊಳ್ಳಬಹುದು. ಚಟ್ನಿ ಜೊತೆ ಟೊಮ್ಯಾಟೋ ದೋಸೆ ಸವಿಯಿರಿ.