ರುಚಿಕರವಾದ ಟೊಮೆಟೋ ಇಡ್ಲಿ ಮಾಡುವ ವಿಧಾನ
09:02 AM May 30, 2024 IST
|
Bcsuddi
Advertisement
ಬೇಕಾಗುವ ಪದಾರ್ಥಗಳು...
Advertisement
- ಟೊಮೆಟೋ- 5-6
- ಉದ್ದಿನ ಬೇಳೆ - 1 ಲೋಟ
- ಇಡ್ಲಿ ರವೆ - 2 ಲೋಟ
- ಉಪ್ಪು- ರುಚಿಗೆ ತಕ್ಕಷ್ಟು
- ಎಣ್ಣೆ- ಸ್ವಲ್ಪ
ಮಾಡುವ ವಿಧಾನ...
- ಉದ್ದಿನ ಬೇಳೆ ಮತ್ತು ಇಡ್ಲಿ ರವೆಯನ್ನು ಪ್ರತ್ಯೇಕವಾಗಿ ನೀರು ಹಾಕಿ 3 ಗಂಟೆಗಳ ಕಾಲ ನೆನೆಸಿಡಿ.
- ಬಳಿಕ ಉದ್ದಿನ ಬೇಳೆ ಮಿಕ್ಸಿ ಜಾರ್'ಗೆ ಹಾಯಿ ನಯವಾಗಿ ಹಿಟ್ಟು ಮಾಡಿಕೊಳ್ಳಿ. ಇದಕ್ಕೆ ಇಡ್ಲಿ ರವೆ ಮತ್ತು ಉಪ್ಪನ್ನು ಸೇರಿಸಿ ಪಾತ್ರೆಯಲ್ಲಿ ಮುಚ್ಚಿಡಿ. ರಾತ್ರಿಯಿಡೀ ಹಿಟ್ಟನ್ನು ಹಾಗೆಯೇ ಬಿಡಿ.
- ಬೆಳಿಗ್ಗೆಟೊಮೆಟೋವನ್ನು ರುಬ್ಬಿ ರಸ ತೆಗೆದುಕೊಂಡು ಹಿಟ್ಟಿನ ಜೊತೆ ಸೇರಿಸಿ. ಹಿಟ್ಟು ತೀರಾ ತೆಳ್ಳಗಾಗದಂತೆ ನೋಡಿಕೊಳ್ಳಿ. ಈಗ ಇಡ್ಲಿ ಪ್ಲೇಟ್ಗಳಿಗೆ ಎಣ್ಣೆ ಸವರಿ ಹಿಟ್ಟನ್ನು ಹಾಕಿ ಆವಿಯಲ್ಲಿ ಬೇಯಿಸಿದರೆ, ಟೊಮೆಟೋ ಇಡ್ಲಿ ಸವಿಯಲು ಸಿದ್ಧ.
Next Article