ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ರುಚಿಕರವಾದ ಚಿರೋಟಿ ರವೆ ಪಡ್ಡು ಮಾಡುವ ವಿಧಾನ

09:02 AM May 06, 2024 IST | Bcsuddi
Advertisement

ಪಡ್ಡುಗಳನ್ನು ಅನೇಕ ವಿಧಗಳಲ್ಲಿ ತಯಾರಿಸಬಹುದು. ಅದರಲ್ಲೂ ಚಿರೋಟಿ ರವೆ ಪಡ್ಡು ರುಚಿ ರುಚಿಯಾಗಿರುತ್ತದೆ. ಇದನ್ನು ತಯಾರಿಸುವ ವಿಧಾನ ಇಲ್ಲಿದೆ.

Advertisement

ಬೇಕಾಗುವ ಸಾಮಾಗ್ರಿಗಳು:

ಉದ್ದಿನ ಬೇಳೆ – 1 ಬಟ್ಟಲು ಕೊತ್ತಂಬರಿ ಸೊಪ್ಪು – 6 ಎಸಳು ಕರಿಬೇವು – 4 ಎಸಳು ಉಪ್ಪು – ರುಚಿಗೆ ತಕ್ಕಷ್ಟು ಹಸಿಮೆಣಸಿನಕಾಯಿ- 2 ರಿಂದ 3 ಹಸಿಶುಂಠಿ – ಸಣ್ಣ ಚೂರು

ಮಾಡುವ ವಿಧಾನ:

ಮೂರು ಗಂಟೆಗಳ ಕಾಲ ನೆನೆಸಿದ ಉದ್ದಿನಬೇಳೆಯನ್ನು ಇಡ್ಲಿ ಹಿಟ್ಟಿನ ಹದದಲ್ಲಿ ರುಬ್ಬಿಟ್ಟುಕೊಳ್ಳಬೇಕು. ಮರುದಿನ ಚಿರೋಟಿ ರವೆ ಸ್ವಲ್ಪ ಬೆಚ್ಚಗೆ ಮಾಡಿ, ಆರಿದ ನಂತರ ಒಂದೆರಡು ಸಲ ನೀರಿನಿಂದ ತೊಳೆದು ಗಟ್ಟಿಯಾಗಿ ನೀರು ಹಿಂಡಿ ಉದ್ದಿನ ಹಿಟ್ಟಿಗೆ ಹಾಕಬೇಕು. ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಹಸಿ ಮೆಣಸಿನಕಾಯಿ, ಸಣ್ಣಗೆ ಹೆಚ್ಚಿದ ಶುಂಠಿ, ಸ್ವಲ್ಪ ಉಪ್ಪು ಸೇರಿಸಿ ರುಬ್ಬಿದ ಹಿಟ್ಟಿಗೆ ಹಾಕಬೇಕು. ಪಡ್ಡು ಕಾವಲಿಗೆ ಎಣ್ಣೆ ಹಾಕಿ ಕಾದ ನಂತರ ಸಿದ್ಧಪಡಿಸಿದ ಹಿಟ್ಟು ಹಾಕಿ ಸ್ವಲ್ಪ ಹೊತ್ತು ಮುಚ್ಚಿ. ಎರಡು ಕಡೆ ಬೆಂದ ನಂತರ ಚಿರೋಟಿ ರವೆ ಪಡ್ಡುಗಳನ್ನು ಕಾಯಿ ಚಟ್ನಿ ಅಥವಾ ಟೊಮೆಟೊ ಚಟ್ನಿ, ಮೊಸರು ಗೊಜ್ಜಿನೊಂದಿಗೆ ಕೂಡ ತಿನ್ನಬಹುದು.

Advertisement
Next Article