ರುಚಿಕರವಾದ ಚಿಕನ್ ಸಮೋಸ ಮಾಡುವ ವಿಧಾನ
09:09 AM Jun 11, 2024 IST | Bcsuddi
Advertisement
ಬೇಕಾಗುವ ಪದಾರ್ಥಗಳು...
- ಸಣ್ಣಗೆ ಕತ್ತರಿಸಿದ್ದ ಚಿಕನ್ – 1 ಬಟ್ಟಲು
- ಮೆಣಸಿನ ಪುಡಿ – ಒಂದೂವರೆ ಚಮಚ
- ಗರಂ ಮಸಾಲಾ – 1 ಚಮಚ
- ಅರಿಶಿನ – ಅರ್ಧ ಚಮಚ
- ಸೋಂಪಿನ ಪುಡಿ – 1 ಚಮಚ
- ಕಾಳುಮೆಣಸು – ಅರ್ಧ ಚಮಚ
- ದನಿಯಾ (ಕೊತ್ತಂಬರಿ) ಪುಡಿ – 2 ಚಮಚ
- ಉಪ್ಪು – ರುಚಿಗೆ ಚಮಚ
- ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
- ಈರುಳ್ಳಿ – ಸಣ್ಣಗೆ ಹೆಚ್ಚಿದ್ದು 3
- ಬೆಳ್ಳುಳ್ಳಿ ಪೇಸ್ಟ್ – 1 ಚಮಚ
- ಶುಂಠಿ ಪೇಸ್ಟ್ – ಒಂದೂವರೆ ಚಮಚ
- ಹಸಿ ಮೆಣಸಿನಾಯಿ – ಸಣ್ಣಗೆ ಹೆಚ್ಚಿದ್ದು 3
- ಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು ಕಾಲು ಬಟ್ಟಲು
- ಮೊಟ್ಟೆ – 1
- ಮೈದಾ ಹಿಟ್ಟು – 2 ಬಟ್ಟಲು
ಮಾಡುವ ವಿಧಾನ...
- ಮೊದಲಿಗೆ ಪ್ಯಾನ್‌ನಲ್ಲಿ 2 ಚಮಚ ಎಣ್ಣೆ ಹಾಕಿ, ಬಿಸಿಯಾದ ಬಳಿಕ ಈರುಳ್ಳಿಯನ್ನು ಹಾಕಿ ಚಿನ್ನದ ಬಣ್ಣ ಬರುವವರೆಗೆ ಹುರಿದುಕೊಳ್ಳಿ. ನಂತರ ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮಿಶ್ರಣ ಮಾಡಿ. ಬಳಿಕ ಸಣ್ಣಗೆ ಹೆಚ್ಚಿದ ಚಿಕನ್, ಸೋಂಪಿನ ಪುಡಿ, ಕಾಳುಮೆಣಸು ಹಾಗೂ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಚಿಕನ್ ಚೆನ್ನಾಗಿ ಬೆಂದ ಬಳಿಕ ಮಿಶ್ರಣವನ್ನು ಆರಲು ಬಿಡಿ.
- ಈಗ ಒಂದು ದೊಡ್ಡ ಪಾತ್ರೆಯನ್ನು ತೆಗೆದುಕೊಂಡು, ಅದರಲ್ಲಿ ಮೈದಾ, ಮೊಟ್ಟೆ ಹಾಗೂ ಉಪ್ಪು ಹಾಕಿ ಮಿಶ್ರಣ ಮಾಡಿ.
- ಹಿಟ್ಟು ಚೆನ್ನಾಗಿ ಮಿಶ್ರಣವಾದ ಬಳಿಕ ಸಣ್ಣ ಸಣ್ಣ ಉಂಡೆಗಳನ್ನು ಸಿದ್ಧಪಡಿಸಿ, ಲಟ್ಟಣಿಗೆಯಿಂದ ರೋಲ್ ಮಾಡಿಕೊಳ್ಳಿ. ಈಗ ಹಿಟ್ಟಿನ ಹಾಳೆಯ ಮೇಲೆ ಎರಡೆರಡು ಚಮಚ ಚಿಕನ್ ಮಿಶ್ರಣವನ್ನು ಹಾಕಿ, ಹಿಟ್ಟನ್ನು ಸಮೋಸ ಆಕಾರದಲ್ಲಿ ಮಡಚಿಕೊಳ್ಳಿ. ಎಲ್ಲಾ ಸ್ಟಫಿಂಗ್‌ಗಳನ್ನು ಹೀಗೇ ತಯಾರಿಸಿಕೊಳ್ಳಿ.
- ಈಗ ತಳವಿರುವ ಬಾಣಲೆಯಲ್ಲಿ ಡೀಪ್ ಫ್ರೈಗೆ ಎಣ್ಣೆ ಹಾಕಿ, ಬಿಸಿಯಾದ ಬಳಿಕ ಸಮೋಸಗಳನ್ನು ಎಣ್ಣೆಯಲ್ಲಿ ಬಿಟ್ಟು ಹುರಿದುಕೊಳ್ಳಿ. ಸಮೋಸ ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ. ಈಗ ಸಮೋಸಗಳನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ. ಇದೀಗ ರುಚಿಕರವಾದ ಗರಿಗರಿಯಾದ ಚಿಕನ್ ಸಮೋಸ ಸವಿಯಲು ಸಿದ್ಧ.
Advertisement