ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ರುಚಿಕರವಾದ ಕ್ಯಾರೆಟ್ ಬಾತ್ ಮಾಡುವ ವಿಧಾನ

09:10 AM Apr 03, 2024 IST | Bcsuddi
Advertisement

ಬೇಕಾಗುವ ಸಾಮಗ್ರಿಗಳು:

Advertisement

ಅನ್ನ, ಕ್ಯಾರೇಟ್, ಈರುಳ್ಳಿ, ಹಸಿ ಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು, ಲಿಂಬೆಹಣ್ಣು, ಶುಂಠಿ, ಎಣ್ಣೆ, ಉದ್ದಿನಬೇಳೆ, ಸಾಸಿವೆ, ಶೇಂಗಾ, ಅರಿಶಿಣ, ಉಪ್ಪು ಹಾಗೂ ಸಕ್ಕರೆ.

ಮಾಡುವ ವಿಧಾನ:

ಕ್ಯಾರೆಟ್ ನ ಸಿಪ್ಪೆ ತೆಗೆದುಕೊಂಡು ತುರಿದುಕೊಳ್ಳಬೇಕು. ನಂತರ ಒಂದು ಬಾಣಲೆಗೆ ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಶೇಂಗಾ, ಹಸಿ ಮೆಣಸು, ಶುಂಠಿ, ಅರಿಶಿಣ, ಕರಿಬೇವು ಹಾಕಿ ಒಗ್ಗರಣೆ ಸಿದ್ಧ ಮಾಡಿಕೊಳ್ಳಬೇಕು. ಸಿದ್ದಪಡಿಸಿಕೊಂಡ ಕ್ಯಾರೆಟ್ ತುರಿಯನ್ನು ಹಾಗೂ ಈರುಳ್ಳಿಯನ್ನು ಒಗ್ಗರಣೆಗೆ ಹಾಕಿ ಹುರಿಯಬೇಕು. ಕ್ಯಾರೆಟ್ ಚೆನ್ನಾಗಿ ಹುರಿದ ನಂತರ ಅನ್ನ, ಉಪ್ಪು, ಸಕ್ಕರೆ, ಲಿಂಬೆ ರಸ ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಕಲಸಬೇಕು. ಇಷ್ಟಾದರೆ ರುಚಿಕರ ಕ್ಯಾರೆಟ್ ಬಾತ್ ರೆಡಿ.

Advertisement
Next Article