For the best experience, open
https://m.bcsuddi.com
on your mobile browser.
Advertisement

ರುಚಿಕರವಾದ ‘ಆಲೂ-ಪಾಲಕ್’ ಬಿರಿಯಾನಿ ಮಾಡುವ ವಿಧಾನ

09:23 AM Feb 22, 2024 IST | Bcsuddi
ರುಚಿಕರವಾದ  ‘ಆಲೂ ಪಾಲಕ್’ ಬಿರಿಯಾನಿ ಮಾಡುವ ವಿಧಾನ
Advertisement

ಬೇಕಾಗುವ ಸಾಮಗ್ರಿಗಳು:

1ಟೇಬಲ್ ಸ್ಪೂನ್ – ತುಪ್ಪ, 2 – ಚಕ್ಕೆ, 4ರಿಂದ 5 – ಲವಂಗ, 1 – ಏಲಕ್ಕಿ, ½ ಟೀ ಸ್ಪೂನ್ – ಶಾಹಿಜಾರ್, 1 ಟೀ ಸ್ಪೂನ್ – ಜೀರಿಗೆ, 1 ಟೇಬಲ್ ಸ್ಪೂನ್ – ಶುಂಠಿ ಬೆಳ್ಳುಳ್ಳಿ ಪೇಸ್ಟ್, 1 – ಈರುಳ್ಳಿ ಉದ್ದಕ್ಕೆ ಸೀಳಿಕೊಳ್ಳಿ, 3 ಕಪ್ – ಪಾಲಕ್ ತೊಳೆದು ಹೆಚ್ಚಿಟ್ಟುಕೊಳ್ಳಿ, 1.5 ಟೀ ಸ್ಪೂನ್ – ಖಾರದ ಪುಡಿ, ½ ಟೀ ಸ್ಪೂನ್ – ಅರಿಶಿನ ಪುಡಿ, 2 ಟೀ ಸ್ಪೂನ್ – ಧನಿಯಾ ಪುಡಿ, 2 ಟೇಬಲ್ ಸ್ಪೂನ್ – ಮೊಸರು, ರುಚಿಗೆ ತಕ್ಕಷ್ಟು – ಉಪ್ಪು. ½ ಕಪ್ – ಪನ್ನೀರ್ (ಚಿಕ್ಕದ್ದಾಗಿ ಕತ್ತರಿಸಿಕೊಂಡಿದ್ದು), 3 – ಆಲೂಗಡ್ಡೆ(ಸಿಪ್ಪೆ ತೆಗದು ಕತ್ತರಿಸಿಕೊಂಡಿದ್ದು), 1 ಕಪ್ – ಬಾಸುಮತಿ ಅಕ್ಕಿ.

ಮಾಡುವ ವಿಧಾನ:

Advertisement

ಮೊದಲಿಗೆ ಅಕ್ಕಿಯನ್ನು ತೊಳೆದು 20 ನಿಮಿಷಗಳ ಕಾಲ ನೆನೆಸಿಕೊಳ್ಳಿ. ನಂತರ ಒಂದು ಕುಕ್ಕರ್ ಗೆ ಹಾಕಿ 2 ಕಪ್ ನೀರು ಹಾಕಿ 1 ವಿಷಲ್ ಕೂಗಿಸಿಕೊಳ್ಳಿ. ಹಾಗೇ ಆಲೂಗಡ್ಡೆಯನ್ನು ಬೇಯಿಸಿಕೊಳ್ಳಿ. ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಹಾಕಿ ಚಕ್ಕೆ, ಲವಂಗ, ಏಲಕ್ಕಿ, ಶಾಹಿಜೀರಾ, ಜೀರಿಗೆ ಹಾಕಿ ತುಸು ಫ್ರೈ ಮಾಡಿ. ನಂತರ ಇದಕ್ಕೆ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ. ನಂತರ ಕತ್ತರಿಸಿದ ಪಾಲಾಕ್ ಸೊಪ್ಪು ಹಾಕಿ 2 ನಿಮಿಷ ಚೆನ್ನಾಗಿ ಫ್ರೈ ಮಾಡಿ. ಇದಕ್ಕೆ ಬೇಯಿಸಿಕೊಂಡ ಆಲೂಗಡ್ಡೆ ಹಾಕಿ ಮಿಕ್ಸ್ ಮಾಡಿ ಖಾರದ ಪುಡಿ, ಅರಿಶಿನ ಪುಡಿ, ಧನಿಯಾ ಪುಡಿ, ಉಪ್ಪು, ಮೊಸರು ಹಾಕಿ ಮಿಕ್ಸ್ ಮಾಡಿ. ನಂತರ ತುರಿದ ಪನ್ನೀರ್ ಸೇರಿಸಿ ನಿಧಾನಕ್ಕೆ ಮಿಕ್ಸ್ ಮಾಡಿ ಇದಕ್ಕೆ ಅನ್ನ ಹಾಕಿ ಎಲ್ಲಾ ಸರಿಹೊಂದುವಂತೆ ಮಿಕ್ಸ್ ಮಾಡಿ ಒಂದು ಮುಚ್ಚಳ ಮುಚ್ಚಿ 5 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿಕೊಂಡರೆ ಆಲೂ-ಪಾಲಾಕ್ ಬಿರಿಯಾನಿ ಸವಿಯಲು ಸಿದ್ಧ.

Author Image

Advertisement