For the best experience, open
https://m.bcsuddi.com
on your mobile browser.
Advertisement

ರುಚಿಕರವಾದ ಆಲೂ ಚಿಕನ್ ಕಬಾಬ್ ಮಾಡುವ ವಿಧಾನ

09:14 AM Jul 18, 2024 IST | Bcsuddi
ರುಚಿಕರವಾದ ಆಲೂ ಚಿಕನ್ ಕಬಾಬ್ ಮಾಡುವ ವಿಧಾನ
Advertisement

ಬೇಕಾಗುವ ಪದಾರ್ಥಗಳು...

  • ಬೇಯಿಸಿದ ಆಲೂಗಡ್ಡೆ – 250 ಗ್ರಾಂ
  • ಬೇಯಿಸಿ ಸಣ್ಣದಾಗಿ ಕಟ್‌ ಮಾಡಿದ ಚಿಕನ್‌ – 250 ಗ್ರಾಂ
  • ಗರಂ ಮಸಾಲಾ – 1 ಚಮಚ
  • ಹುರಿದ ಜೀರಿಗೆ ಪುಡಿ – 1 ಚಮಚ
  • ಸೋಯಾ ಸಾಸ್ – 1 ಚಮಚ
  • ಕಾಳು ಮೆಣಸಿನ ಪುಡಿ – 1/2 ಚಮಚ
  • ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
  • ಹಸಿರು ಮೆಣಸಿನಕಾಯಿ – 3-4
  • ಕತ್ತರಿಸಿದ ಕೊತ್ತಂಬರಿ ಸೊಪ್ಪು – 1 ಬಟ್ಟಲು
  • ಮೊಟ್ಟೆ – 2
  • ಬ್ರೆಡ್ ಕ್ರಂಬ್ಸ್ – 1 ಬಟ್ಟಲು
  • ಎಣ್ಣೆ- ಹುರಿಯಲು
  • ಉಪ್ಪು- ರುಚಿಗೆ ತಕ್ಕಷ್ಟು
  • ಮಾಡುವ ವಿಧಾನ...

    • ಮೊದಲು ಮಿಕ್ಸಿಂಗ್ ಬೌಲ್ ಅನ್ನು ತೆಗೆದುಕೊಂಡು, ಬೇಯಿಸಿದ ಆಲೂಗಡ್ಡೆಯನ್ನು ಸೇರಿಸಿ ಮತ್ತು ನುಣ್ಣಹೆ ಮಾಡಿಕೊಳ್ಳಿ.
    • ನುಣ್ಣಗೆ ಮಾಡಿಕೊಂಡ ಆಲೂಗಡ್ಡೆ ಬೇಯಿಸಿಕೊಂಡ ಚಿಕನ್, ಗರಂ ಮಸಾಲಾ, ಉಪ್ಪು, ಹುರಿದ ಜೀರಾ ಪುಡಿ, ಕಾಳು ಮೆಣಸಿನ ಪುಡಿ, ಹಸಿರು ಮೆಣಸಿನಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಪುದೀನಾ, ಸೋಯಾ ಸಾಸ್ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರಣ ಮಾಡಿಕೊಳ್ಳಿ.
    • ನಂತರ ಈ ಮಿಶ್ರಣವನ್ನು 10-15 ನಿಮಿಷಗಳ ಕಾಲ ಫ್ರಿಜ್‍ನಲ್ಲಿಡಿ.
    • ನಂತರ ಫ್ರಿಜ್‍ನಲ್ಲಿದ್ದ ಮಿಶ್ರಣವನ್ನು ವಡೆಯ ರೀತಿ ತಟ್ಟಿ ಅದನ್ನು ಮೊಟ್ಟೆಯಲ್ಲಿ ಅದ್ದಿ, ನಂತರ ಬ್ರೆಡ್ ಕ್ರಂಬ್ಸ್ ನಲ್ಲಿ ಅದ್ದಿ, ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿದರೆ ರುಚಿಕರವಾದ ಆಲೂ ಚಿಕನ್ ಕಬಾಬ್ ಸವಿಯಲು ಸಿದ್ಧ.
Advertisement
Author Image

Advertisement