For the best experience, open
https://m.bcsuddi.com
on your mobile browser.
Advertisement

ರುಚಿಕರವಾದ ʼಪ್ರಾನ್ಸ್ʼ ಮಲಾಯ್ ಕರಿ ಮಾಡುವ ವಿಧಾನ

09:10 AM Mar 03, 2024 IST | Bcsuddi
ರುಚಿಕರವಾದ ʼಪ್ರಾನ್ಸ್ʼ ಮಲಾಯ್ ಕರಿ ಮಾಡುವ ವಿಧಾನ
Advertisement

ಬೇಕಾಗುವ ಸಾಮಾಗ್ರಿಗಳು:

ಸೀಗಡಿ ಸ್ವಚ್ಛ ಮಾಡಿದ್ದು 500 ಗ್ರಾಂ, ಈರುಳ್ಳಿ-1, ಟೊಮಾಟೊ-2, ಹಸಿ ಮೆಣಸಿನಕಾಯಿ-1, ಎಣ್ಣೆ ದೊಡ್ಡ ಚಮಚದಲ್ಲಿ – ಒಂದೂವರೆ ಚಮಚ, ಶುಂಠಿ ಪೇಸ್ಟ್-ಅರ್ಧ ಚಮಚ, ಗರಂ ಮಸಾಲ-1 ಚಮಚ, ದನಿಯಾ-1 ಚಮಚ, ಜೀರಿಗೆ ಪುಡಿ ಅರ್ಧ ಚಮಚ, ತೆಂಗಿನ ಹಾಲು-1 ಕಪ್, ಉಪ್ಪು-ರುಚಿಗೆ ತಕ್ಕಷ್ಟು, ಕ್ರೀಂ-1 ಸ್ಪೂನ್, ಕೊತ್ತಂಬರಿ ಸೊಪ್ಪು ಹೆಚ್ಚಿದ್ದು.

ಮಾಡುವ ವಿಧಾನ:

Advertisement

ಈರುಳ್ಳಿ, ಟೊಮಾಟೊ, ಹಸಿ ಮೆಣಸಿನಕಾಯಿ ಮಿಕ್ಸಿ ಜಾರ್ ಗೆ ಹಾಕಿ ರುಬ್ಬಿಕೊಳ್ಳಿ. ಎಣ್ಣೆ ಬಿಸಿ ಮಾಡಿ ಅದರಲ್ಲಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಗರಂ ಮಸಾಲ ಪುಡಿ, ದನಿಯಾ ಪುಡಿ, ಜೀರಿಗೆ ಪುಡಿ ಹಾಕಿ ಸಣ್ಣ ಉರಿಯಲ್ಲಿ ಕರಿಯಿರಿ. ಅದಕ್ಕೆ ರುಬ್ಬಿದ ಮಸಾಲ ಮಿಕ್ಸ್ ಮಾಡಿ ಸ್ವಲ್ಪ ಹೊತ್ತು ತಿರುಗಿಸುತ್ತಾ ಇರಿ. ನಂತರ ತೆಂಗಿನಕಾಯಿ ಹಾಲು, ಸ್ವಚ್ಛ ಮಾಡಿದ ಸೀಗಡಿಯನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಬೇಕು. ಬಳಿಕ ಒಲೆಯ ಮೇಲಿಂದ ಇಳಿಸಿ ಕ್ರೀಂ ಬೆರೆಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಬಿಸಿ ಬಿಸಿ ಪ್ರಾನ್ಸ್ ಮಲಾಯ್ ಬಡಿಸಲು ಸಿದ್ಧ.

Author Image

Advertisement